- Advertisement -
![]()
- Advertisement -
ಬೆಳ್ತಂಗಡಿ: ಆ.6 ರಂದು ಸಂಜೆ ಧರ್ಮಸ್ಥಳ ಗ್ರಾಮದ ಪಾಂಗಳ ಕ್ರಾಸ್ ನಲ್ಲಿ ನಾಲ್ಕು ಮಂದಿ ಯೂಟ್ಯೂಬರ್ಸ್ ಮೇಲೆ ಹಲ್ಲೆ ನಡೆಸಿ ಕ್ಯಾಮರಾಗಳಿಗೆ ಹಾನಿ ಮಾಡಿ ಜೀವ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ಯಾಡಿ ನಿವಾಸಿ, ಜೀಪು ಚಾಲಕ ಸೋಮನಾಥ ಸಫಲ್ಯ (48) ನನ್ನು ಆ.7ರಂದು ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಮರ್ಥ್ ಆರ್ ಗಾಣಿಗೇರಾ ನೇತೃತ್ವದ ತಂಡ ಕೊಕ್ಕಡದಲ್ಲಿ ಬಂಧಿಸಿರುವುದಾಗಿ ತಿಳಿದುಬಂದಿದೆ. ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಘಟನೆ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ 189(2),191(2),115(2),324(5),352,307 ಜೊತೆಗೆ 190 BNS ಅಡಿಯಲ್ಲಿ ಸುಮಾರು 15 ರಿಂದ 50 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
- Advertisement -


