Wednesday, June 3, 2026
HomeUncategorizedಸುಭಾಷ್ ಚಂದ್ರ ಬೋಸ್ ಐಕಾನ್ ಅವಾರ್ಡ್ 2025ಕ್ಕೆ ಪ್ರಶಸ್ತಿಗೆ ದೀಪಕ್ ಜಿ ಬೆಳ್ತಂಗಡಿ ಭಾಜನ

ಸುಭಾಷ್ ಚಂದ್ರ ಬೋಸ್ ಐಕಾನ್ ಅವಾರ್ಡ್ 2025ಕ್ಕೆ ಪ್ರಶಸ್ತಿಗೆ ದೀಪಕ್ ಜಿ ಬೆಳ್ತಂಗಡಿ ಭಾಜನ

- Advertisement -
- Advertisement -

ಬೆಳ್ತಂಗಡಿ: ಸುಭಾಷ್ ಚಂದ್ರ ಬೋಸ್ ಐಕಾನ್ ಅವಾರ್ಡ್ 2025ರ ಪ್ರಶಸ್ತಿಗೆ ರಾಜ ಕೇಸರಿ ಸಂಘಟನೆ ಸಂಸ್ಥಾಪಕರಾದ ದೀಪಕ್ ಜಿ ಬೆಳ್ತಂಗಡಿ ಅವರು ಭಾಜನರಾಗಿದ್ದಾರೆ.

ಕಳೆದ 13 ವರ್ಷಗಳಿಂದ ನಿರಂತರವಾಗಿ ಸಮಾಜದಿಂದ ಸಮಾಜಕ್ಕೆ ಕೊಡುಗೆ ನೀಡುತ್ತಿರುವ ರಾಜ ಕೇಸರಿಯ ಟ್ರಸ್ಟನ್ನು ಹುಟ್ಟಿಹಾಕಿ ಶ್ರಮಿಕ ಯುವಕರನ್ನು ಒಟ್ಟುಗೂಡಿಸಿದ್ದಾರೆ. ಅಷ್ಟೇಅಲ್ಲದೆ ಅವರು ತಮ್ಮ ಕೈಲಾದ ಸೇವೆಯನ್ನ ನೀಡುವ ಮೂಲಕ ಸಮಾಜದ ದಾನಿಗಳ ಮೂಲಕ ಅದೆಷ್ಟೋ ಕುಟುಂಬಗಳಿಗೆ ಆಸರೆಯಾಗಿದ್ದಾರೆ.

ದೀಪಕ್ ಜಿ ಬೆಳ್ತಂಗಡಿ ಅವರು ಎಷ್ಟೋ ವಿದ್ಯಾರ್ಥಿಗಳ ಬಾಳಲ್ಲಿ ಬೆಳಕಾಗಿ, ಜನ ಸೇವಾ ಮನೋಭಾವದ ಮೂಲಕ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುದ್ದಾರೆ. ಪ್ರಸ್ತುತ ಸೇವಾ ಸಂಘಟನೆಯಾದ ರಾಜ ಕೇಸರಿ ಸಂಘಟನೆಯನ್ನ ಮುನ್ನಡೆಸುತ್ತಿರುವಂತಹ ದೀಪಕ್ ಜಿ ಬೆಳ್ತಂಗಡಿ ಅವರಿಗೆ ಜೀವನ್ ಜಾಗೃತಿ ಸೇವಾ ಸಂಸ್ಥೆ ವತಿಯಿಂದ ಸುಭಾಷ್ ಚಂದ್ರ ಬೋಸ್ ಐಕಾನ್ ಪ್ರಶಸ್ತಿ ಲಭಿಸಿದೆ

- Advertisement -

Latest News

error: Content is protected !!