- Advertisement -
![]()
- Advertisement -
ಬಂಟ್ವಾಳ: ತುಳುರಂಗಭೂಮಿ ಕಲಾವಿದ ಮೌನೇಶ್ ಆಚಾರ್ಯ(44) ಮಂಗಳವಾರ ಮುಂಜಾನೆ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ
ಚಿನ್ನದ ಕೆಲಸಮಾಡುತ್ತಿದ್ದ ಅವರು ಜೊತೆಗೆ ಮನೆ ಸಮೀಪವೇ ಚಿಕ್ಕ ದಿನಸಿ ಅಂಗಡಿ ನಡೆಸುತ್ತಿದ್ದರು. ಹಾಸ್ಯಪ್ರಜ್ಞೆ ಉಳ್ಳವರಾಗಿದ್ದ ಇವರು ಜಯಂ ಕಲಾನಿಕೇತನ ಮಾಣಿ ನೃತ್ಯತಂಡದಲ್ಲಿ ಕಲಾವಿದರಾಗಿದ್ದ ಇವರು ಕಲಾಮಾತೆ ನಾಗನವಳಚ್ಚಿಲ್ ತಂಡದ ಕಲಾವಿದರಾಗಿದ್ದು, ಶಾಂತರಾಮ್ ಕಲ್ಲಡ್ಕ ನಿರ್ದೇಶನದ ತುಳು ಅಪ್ಪೆಜೋಕ್ಲು ಕಲಾ ಬಳಗದ ನಾಟಕಗಳಲ್ಲಿಯೂ ಅಭಿನಯಿಸಿದ್ದರು.
ಪ್ರಸ್ತುತ ನಮ್ಮ ಕಲಾವಿದರು ನೆಲ್ಯಾಡಿ ತುಳುನಾಟಕ ತಂಡದ ಕಲಾವಿದರಾಗಿದ್ದ ಇವರು, ಯುವ ಕಲಾವಿದ ಸಚಿನ್ ಮಾಣಿ ಯವರ ಹಲವು ಹಾಸ್ಯ ವಿಡಿಯೋಗಳಲ್ಲಿ ಅಭಿನಯಿಸಿದವರು. ಸ್ನೇಹಜೀವಿಯಾಗಿದ್ದ ಇವರ ಅಗಲಿಕೆ ಆಪ್ತರಿಗೆ ಅಘಾತವನ್ನು ಉಂಟು ಮಾಡಿದೆ . ಮೃತರು ತಾಯಿ, ಸಹೋದರ, ಪತ್ನಿ, ಪುಟ್ಟಮಗಳು ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
- Advertisement -


