Friday, June 5, 2026
Homeಪ್ರಮುಖ-ಸುದ್ದಿರಾಜ್ಯದಲ್ಲಿಂದು ಪತ್ತೆಯಾದ ಕೊರೊನಾ ಕೇಸುಗಳೆಷ್ಟು? ಹೆಮ್ಮಾರಿಗೆ ಬಲಿಯಾದವರೆಷ್ಟು? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್....

ರಾಜ್ಯದಲ್ಲಿಂದು ಪತ್ತೆಯಾದ ಕೊರೊನಾ ಕೇಸುಗಳೆಷ್ಟು? ಹೆಮ್ಮಾರಿಗೆ ಬಲಿಯಾದವರೆಷ್ಟು? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್….

- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ಮತ್ತೆ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದೆ ಕೊರೊನಾ. ಇಂದು ಒಂದೇ ದಿನ ಬರೋಬ್ಬರಿ 4764 ಹೊಸ ಕೋವಿಡ್ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿವೆ. ಇದರೊಂದಿಗೆ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 75,833ಕ್ಕೆ ಏರಿಕೆಯಾಗಿದೆ. ಇನ್ನು ಇಂದು ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಒಟ್ಟು 55 ಮಂದಿ ಕೋವಿಡ್ ನಿಂದಾಗಿ ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯದಲ್ಲಿ 47069 ಸಕ್ರೀಯ ಪ್ರಕರಣಗಳಿದ್ದು, ಇಂದಿನವರೆಗೂ 27,239 ಮಂದಿ ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹಾಗೇ ಇಂದು ಒಟ್ಟು 1,780 ಮಂದಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ 1519 ಮಂದಿಯನ್ನು ಇದುವರೆಗೂ ಕೊರೊನಾ ಬಲಿ ಪಡೆದುಕೊಂಡಿದೆ.

ಇನ್ನು ರಾಜ್ಯ ರಾಜಧಾನಿಯಲ್ಲಿ ಇಂದು 2,050 ಹೊಸ ಪ್ರಕರಣಗಳು ಇಂದು ವರದಿಯಾಗಿವೆ. ಹಾಗೇ 15 ಮಂದಿ ಇವತ್ತು ಕೊರೊನಾಗೆ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 36,993 ಪ್ರಕರಣಗಳು ಇದುವರೆಗೂ ವರದಿಯಾಗಿದ್ದು, 8288 ಮಂದಿ ಗುಣಮುಖರಾಗಿದ್ದಾರೆ. ಹಾಗೇ ಸದ್ಯ 27,969 ಸಕ್ರೀಯ ಪ್ರಕರಣಗಳಿವೆ. ಇದುವರೆಗೂ ಒಟ್ಟು 735 ಬೆಂಗಳೂರಿನಲ್ಲಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.

- Advertisement -

Latest News

error: Content is protected !!