- Advertisement -
![]()
- Advertisement -
ಗುಪ್ತಚರ ಇಲಾಖೆ ವೈಫಲ್ಯ ಕಾಶ್ಮೀರದ ಉಗ್ರದಾಳಿಯಲ್ಲಿದೆ ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಅವರು ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಈ ಕುರಿತಂತೆ ಮಾತನಾಡಿ, ” 40 ಮಂದಿ ಸೈನಿಕರು ಪುಲ್ವಾಮ ದಾಳಿಯಲ್ಲಿ ಅಸುನೀಗಿದ್ದು, 26 ಮಂದಿ ನಾಗರಿಕರು ಮೊನ್ನೆ ಘಟನೆಯಲ್ಲಿ ಅಸುನೀಗಿದ್ದಾರೆ. ಮುಖ್ಯವಾಗಿ ಕೆಂದ್ರ ಸರ್ಕಾರವು ಪುಲ್ವಾಮ ದಾಳಿ ಬಳಿಕ ವಿರಮಿಸಬಾರದಿತ್ತು, ಮೂರನೇ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು,” ಎಂದು ಆಗ್ರಹಿಸಿದರು.
ಫಹಲ್ಗಾಮ್ ನಲ್ಲಿ ನಡೆದ ಉಗ್ರದಾಳಿ ಅತ್ಯಂತ ಅಮಾನವೀಯ ಹೇಯ ಕೃತ್ಯವಾಗಿದೆ. ಸರ್ಕಾರವು ಮೃತ ಕುಟುಂಬಸ್ಥರ ಜೊತೆಗಿರುತ್ತದೆ. ಹಾಗೆಯೇ ಎಲ್ಲರಿಗೂ 10 ಲಕ್ಷ ಪರಿಹಾರ ಕೊಟ್ಟಿದ್ದೇವೆ, ಇನ್ನು ಮುಂದೆ ಬಹಳ ಎಚ್ಚರಿಕೆಯಿಂದ ಇರಬೇಕೆಂರು ಪೊಲೀಸರಿಗೆ ಸೂಚನೆ ಕೊಟ್ಟಿದ್ದೇನೆ ಎಂದರು.
- Advertisement -


