Wednesday, June 3, 2026
Homeತಾಜಾ ಸುದ್ದಿಪೊರಕೆ ಹಿಡಿದ ಹೊಸ ಅವತಾರದಲ್ಲಿ ದೊಡ್ಮನೆ ಕುಡಿ; ಯುವ ರಾಜಕುಮಾರ್ ನಟನೆಯ ಸಿನಿಮಾ ಟೀಸರ್ ರಿಲೀಸ್

ಪೊರಕೆ ಹಿಡಿದ ಹೊಸ ಅವತಾರದಲ್ಲಿ ದೊಡ್ಮನೆ ಕುಡಿ; ಯುವ ರಾಜಕುಮಾರ್ ನಟನೆಯ ಸಿನಿಮಾ ಟೀಸರ್ ರಿಲೀಸ್

- Advertisement -
- Advertisement -

ಯುವ ರಾಜಕುಮಾರ್‍ ಅವರ ಹೊಸ ಚಿತ್ರ ‘ಎಕ್ಕ’ದ ಟೀಸರ್‍ ಇಂದು ಡಾ. ರಾಜಕುಮಾರ್‍ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿದ್ದು, ಕೈಯಲ್ಲಿ ಪೊರಕೆ ಹಿಡಿದ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 

ಒಂದು ನಿಮಿಷ ಒಂಬತ್ತು ಸೆಕೆಂಡ್‌ ಇರುವ ಟೀಸರ್‍ ನಲ್ಲಿ ಮಗು-ಮೃಗ ಎಂದು ಡೈಲಾಗ್‌ ಹೊಡೆಯುತ್ತಾ, ‘ಇದು ಇಲ್ಲಿಗೆ ನಿಲ್ಲೋದಿಲ್ಲ’ ಎಂದು ಕೈಯಲ್ಲಿ ಪೊರಕೆ ಹಿಡಿದು ಫೋಸ್ ಕೊಟ್ಟಿದ್ದಾರೆ.

ಯುವ ರಾಜಕುಮಾರ್ ಅವರ ಈ ಸಿನಿಮಾವನ್ನು ರೋಹಿತ್‍ ಪದಕಿ ನಿರ್ದೇಶಿಸಿದ್ದು, ಯುವಗೆ ಸಂಜನಾ ಆನಂದ್‍ ಮತ್ತು ಸಂಪದ ನಾಯಕಿಯರಾಗಿ ನಟಿಸಿದ್ದಾರೆ. ಉಳಿದಂತೆ ಅತುಲ್ ಕುಲಕರ್ಣಿ, ಆದಿತ್ಯ, ಶ್ರುತಿ, ಪೂರ್ಣಚಂದ್ರ ಮೈಸೂರು, ಪುನೀತ್‍ ರುದ್ರನಾಗ್‍, ಸಾಧು ಕೋಕಿಲ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚರಣ್ ರಾಜ್ ಸಂಗೀತ, ಸತ್ಯ ಹೆಗಡೆ ಛಾಯಾಗ್ರಹಣವಿರುವ ಈ ಚಿತ್ರವನ್ನು ರೋಹಿತ್‍ ಪದಕಿ ನಿರ್ದೇಶನ ಮಾಡಿದ್ದಾರೆ.

ಈ ಚಿತ್ರವನ್ನು ಕನ್ನಡದ ಮೂರು ಜನಪ್ರಿಯ ನಿರ್ಮಾಣ ಸಂಸ್ಥೆಗಳಾದ PRK ಪ್ರೊಡಕ್ಷನ್ಸ್, ಜಯಣ್ಣ ಫಿಲಂಸ್‍ ಮತ್ತು KRG ಸ್ಟುಡಿಯೋಸ್‍ ಜೊತೆಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿರುವುದು ವಿಶೇಷ. ಈ ಚಿತ್ರವನ್ನು ಅಶ್ವಿನಿ ಪುನೀತ್‍ ರಾಜಕುಮಾರ್‍, ಜಯಣ್ಣ, ಭೋಗೇಂದ್ರ, ಕಾರ್ತಿಕ್‍ ಗೌಡ ಮತ್ತು ಯೋಗಿ ಜೊತೆಯಾಗಿ ನಿರ್ಮಿಸುತ್ತಿದ್ದಾರೆ.

- Advertisement -

Latest News

error: Content is protected !!