Wednesday, June 3, 2026
HomeWorldಭಾರತದ ಮೇಲೆ ದಾಳಿಗೈದ ಉಗ್ರರನ್ನು ಹುಡುಕಿ, ಹುಡುಕಿ ಹೊಡೆಯುತ್ತೇವೆ; ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ 

ಭಾರತದ ಮೇಲೆ ದಾಳಿಗೈದ ಉಗ್ರರನ್ನು ಹುಡುಕಿ, ಹುಡುಕಿ ಹೊಡೆಯುತ್ತೇವೆ; ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ 

- Advertisement -
- Advertisement -

ಬಿಹಾರ: ಭಾರತದ ಮೇಲೆ ಉಗ್ರವಾಗಿ ದಾಳಿ ನಡೆಸಿರುವ ಪ್ರತಿಯೊಬ್ಬ ಉಗ್ರನನ್ನು ಹುಡುಕಿ ಹುಡುಕಿ ಹೊಡೆದು ಮಣ್ಣಿನಲ್ಲಿ ಹೂತು ಹಾಕುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. 

ಮೋದಿ ಎಚ್ಚರಿಕೆ ನೀಡುವ ಸಂದರ್ಭದಲ್ಲಿ ಹಿಂದಿ ಮತ್ತು ಇಂಗ್ಲಿಷ್‍ನಲ್ಲಿ ಕಟು ಸಂದೇಶವನ್ನ ರವಾನಿಸಿದ್ದು, ನಾನು ಈ ಜಗತ್ತಿಗೆ ಸ್ಪಷ್ಟವಾದ ಸಂದೇಶ ಕೊಡಲು ಬಯಸುತ್ತೇನೆ. ಅಮಾಯಕರನ್ನು ಕೊಂದಿರುವವರಿಗೆ ಮುಟ್ಟಿ ನೋಡಿಕೊಳ್ಳುವಂತಹ ಶಿಕ್ಷೆಯಾಗಲಿದೆ. ಪಹಲ್ಗಾಮ್‍ನಲ್ಲಿ ದಾಳಿ ಮಾಡಿದವರು ಮತ್ತು ಸಂಚು ರೂಪಿಸಿದವರಿಗೆ ಕಲ್ಪನೆಗೂ ಮೀರಿದ ರೀತಿಯಲ್ಲಿ ಶಿಕ್ಷೆಯಾಗುತ್ತದೆ ಎಂದು ಗುಡುಗಿದರು.

- Advertisement -

Latest News

error: Content is protected !!