Wednesday, June 24, 2026
Homeಕರಾವಳಿಪಾರ್ಕಿಂಗ್ ಸಮಸ್ಯೆಗೆ ವಾಹನ ಸವಾರರು ಕಂಗಾಲು; ಐದೇ ತಿಂಗಳಲ್ಲಿ ಲಕ್ಷಾಂತರ ರೂ. ದಂಡ ವಸೂಲಿ!

ಪಾರ್ಕಿಂಗ್ ಸಮಸ್ಯೆಗೆ ವಾಹನ ಸವಾರರು ಕಂಗಾಲು; ಐದೇ ತಿಂಗಳಲ್ಲಿ ಲಕ್ಷಾಂತರ ರೂ. ದಂಡ ವಸೂಲಿ!

- Advertisement -
- Advertisement -

ಮಂಗಳೂರು: ಪಾರ್ಕಿಂಗ್ ಜಾಗದ ಕೊರತೆಯಿಂದಾಗಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿದ್ದು, ಅನಧಿಕೃತವಾಗಿ ವಿವಿಧೆಡೆ ವಾಹನ ನಿಲ್ಲಿಸಿದ ಮಾಲೀಕರಿಗೆ ಕಳೆದ ಕೇವಲ ಐದು ತಿಂಗಳ ಅವಧಿಯಲ್ಲಿಯೇ 12.4 ಲಕ್ಷ ರೂ. ದಂಡ ವಿಧಿಸಲಾಗಿದೆ.

ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಪಾರ್ಕಿಂಗ್ ವ್ಯವಸ್ಥೆ ಇಲ್ಲದಿರುವುದು ಸಾರ್ವಜನಿಕರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಸಂಚಾರ ಪೊಲೀಸರ ಅಂಕಿ-ಅಂಶಗಳ ಪ್ರಕಾರ, 2025ರಲ್ಲಿ ನಗರದಲ್ಲಿ ಒಟ್ಟು 8,885 ಪಾರ್ಕಿಂಗ್ ಉಲ್ಲಂಘನೆ ಪ್ರಕರಣಗಳು ದಾಖಲಾಗಿ 47.2 ಲಕ್ಷ ರೂ. ದಂಡ ಸಂಗ್ರಹಿಸಲಾಗಿತ್ತು; ಇನ್ನು 2026ರಲ್ಲಿ ಇದುವರೆಗೆ 2,294 ಪ್ರಕರಣಗಳು ದಾಖಲಾಗಿವೆ. ನಗರದ ಕೆಲವು ಕಡೆ ರಸ್ತೆಗಳನ್ನು ಅಗಲಗೊಳಿಸಿ ರಸ್ತೆ ಬದಿಯ ಪಾರ್ಕಿಂಗ್‌ಗೆ ಅವಕಾಶ ನೀಡಲಾಗಿದೆಯಾದರೂ, ಬಹುತೇಕ ಕಡೆಗಳಲ್ಲಿ ರಸ್ತೆಗಳು ಕಿರಿದಾಗಿದ್ದು, ಅಲ್ಲಿ ವಾಹನ ನಿಲ್ಲಿಸುವುದರಿಂದ ಇತರ ವಾಹನಗಳ ಮುಕ್ತ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಇದರ ಜೊತೆಗೆ, ಕೆಲವು ಸಭಾಂಗಣಗಳಲ್ಲಿ ಕಾರ್ಯಕ್ರಮಗಳು ಆಯೋಜನೆಗೊಂಡಾಗ ಸೂಕ್ತ ವ್ಯವಸ್ಥೆ ಇಲ್ಲದೆ ವಾಹನಗಳನ್ನು ರಸ್ತೆ ಬದಿಯಲ್ಲೇ ಸಾಲು ಸಾಲಾಗಿ ನಿಲ್ಲಿಸಲಾಗುತ್ತಿದ್ದು, ಇದು ನಗರದಲ್ಲಿ ತೀವ್ರ ವಾಹನ ದಟ್ಟಣೆಗೆ ಕಾರಣವಾಗುತ್ತಿದೆ.

- Advertisement -

Latest News

error: Content is protected !!