Friday, June 27, 2025
HomeUncategorizedಹಾಲಿನ ದರ, ಕರೆಂಟ್ ಬಿಲ್ ಏರಿಕೆಯ ಬೆನ್ನಲ್ಲೇ ಮತ್ತೊಂದು ಶಾಕ್ ಕೊಟ್ಟ ರಾಜ್ಯ ಸರ್ಕಾರ; ಡೀಸೆಲ್...

ಹಾಲಿನ ದರ, ಕರೆಂಟ್ ಬಿಲ್ ಏರಿಕೆಯ ಬೆನ್ನಲ್ಲೇ ಮತ್ತೊಂದು ಶಾಕ್ ಕೊಟ್ಟ ರಾಜ್ಯ ಸರ್ಕಾರ; ಡೀಸೆಲ್ ದರ 2 ರೂಪಾಯಿ ಏರಿಕೆ

spot_img
- Advertisement -
- Advertisement -

ಬೆಂಗಳೂರು; ಹಾಲಿನ ದರ, ಕರೆಂಟ್ ಬಿಲ್ ಏರಿಕೆಯ ಬೆನ್ನಲ್ಲೇ ರಾಜ್ಯ ಸರ್ಕಾರ ಮತ್ತೊಂದು ಶಾಕ್ ಕೊಟ್ಟಿದೆ. ಡೀಸೆಲ್ ದರ 2 ರೂಪಾಯಿ ಏರಿಕೆ ಮಾಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ನೀಡಿದೆ.  ಇಂದು ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ.

ರಾಜ್ಯ ಸರ್ಕಾರ ಡೀಸೆಲ್ ಮೇಲಿನ ಮಾರಾಟ ತೆರಿಗೆ 2 ರೂಪಾಯಿ ಹೆಚ್ಚಳ ಮಾಡಿದೆ. ಡೀಸೆಲ್ ಮೇಲಿನ ಸೆಸ್ ಇದುವರೆಗೂ ಶೇಕಡಾ 18.44 ರಷ್ಟಿತ್ತು. ಇಂದು ಮಧ್ಯರಾತ್ರಿಯಿಂದ ಡೀಸೆಲ್ ಮೇಲಿನ ತೆರಿಗೆ ಶೇಕಡಾ 21.17ಕ್ಕೆ ಏರಿಕೆ ಮಾಡಲಾಗುತ್ತಿದೆ.

ಬೆಂಗಳೂರಲ್ಲಿ ಸದ್ಯ ಡೀಸೆಲ್ ಲೀಟರ್‌ಗೆ 89 ರೂಪಾಯಿ 2 ಪೈಸೆ ಇದ್ದು, ದರ ಏರಿಕೆ ಆದೇಶದ ಪ್ರಕಾರ 91 ರೂಪಾಯಿ 2 ಪೈಸೆಗೆ ಏರಿಕೆಯಾಗಲಿದೆ. ಡೀಸೆಲ್ 2 ರೂ. ದರ ಹೆಚ್ಚಳ ಮಾಡಿರೋದ್ರಿಂದ ನಾಳೆಯಿಂದ ಸಾಲು, ಸಾಲು ದರ ಏರಿಕೆಯ ಬಿಸಿ ಜನಸಾಮಾನ್ಯರಿಗೆ ತಟ್ಟಲಿದೆ.

- Advertisement -
spot_img

Latest News

error: Content is protected !!