Thursday, June 4, 2026
HomeUncategorizedಚಿಕ್ಕಮಗಳೂರು;  ಪತ್ನಿ ಮೇಲಿನ ಕೋಪಕ್ಕೆ ಮಗಳು, ಅತ್ತೆ, ನಾದಿನಿಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಪಾಪಿ

ಚಿಕ್ಕಮಗಳೂರು;  ಪತ್ನಿ ಮೇಲಿನ ಕೋಪಕ್ಕೆ ಮಗಳು, ಅತ್ತೆ, ನಾದಿನಿಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಪಾಪಿ

- Advertisement -
- Advertisement -

ಚಿಕ್ಕಮಗಳೂರು;  ಪತ್ನಿ ಮೇಲಿನ ಕೋಪಕ್ಕೆ ಮಗಳು, ಅತ್ತೆ, ನಾದಿನಿಯನ್ನು ಕೊಂದು ಪಾಪಿಯೊಬ್ಬ ತಾನೂ ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಮಗಳೂರು ತಾಲೂಕಿನ ಮಾಗಲು ಗ್ರಾಮದಲ್ಲಿ ನಡೆದಿದೆ. ಮೌಲ್ಯ (7), ಜ್ಯೋತಿ (55), ಸಿಂಧು (24) ಕೊಲೆಯಾದವರು. ಪಾಪಿ ರತ್ನಕಾರ್ ಮೂವರನ್ನು ಗುಂಡಿ ಹಾರಿಸಿ ಕೊಲೆ ಮಾಡಿ ತಾನೂ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾನೆ.  ನಾದಿನಿಯ ಗಂಡನ ಕಾಲಿಗೂ ಗುಂಡು ತಗುಲಿದ್ದು ಅಪಾಯದಿಂದ ಪಾರಾಗಿದ್ದಾರೆ.

ಪಾಪಿ ರತ್ನಾಕರ್ ಸ್ವಾತಿ ಎಂಬುವರನ್ನ 8 ವರ್ಷದ ಹಿಂದೆ ಮದುವೆಯಾಗಿದ್ದ. ಎರಡು ವರ್ಷದಿಂದ ಅವರು ರತ್ನಾಕರ್ ನಿಂದ ದೂರವಾಗಿದ್ದರು. ಸದ್ಯ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಇದೇ ಕೋಪಕ್ಕೆ ನಿನ್ನೆ ರಾತ್ರಿ ಅತ್ತೆ ಮನೆಗೆ ಬಂದು ಜಗಳ ಮಾಡಿ ಗುಂಡು ಹಾರಿಸಿ ಕೊಂದಿದ್ದಾನೆ. ಕೊಲೆ ಮಾಡೋ ಮುನ್ನ ವೀಡಿಯೋ ಒಂದನ್ನು ಮಾಡಿದ್ದಾನೆ. ಸ್ಥಳಕ್ಕೆ ಬಾಳೆಹೊನ್ನೂರು ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!