Wednesday, April 16, 2025
Homeಕರಾವಳಿಉಡುಪಿಉಡುಪಿ; ನಿಟ್ಟೆ ಕಾಲೇಜು ವಿದ್ಯಾರ್ಥಿ  ನಾಪತ್ತೆ

ಉಡುಪಿ; ನಿಟ್ಟೆ ಕಾಲೇಜು ವಿದ್ಯಾರ್ಥಿ  ನಾಪತ್ತೆ

spot_img
- Advertisement -
- Advertisement -

ಉಡುಪಿ; ನಿಟ್ಟೆ ಕಾಲೇಜು ವಿದ್ಯಾರ್ಥಿ ಯಡ್ತರೆ ಗ್ರಾಮದ ಮಹಾಬಲೇಶ್ವರ ಎಂಬವರ ಮಗ ಅಭಿನಂದನ್(20) ಎಂಬಾತ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಭಿನಂದನ್ ನಿಟ್ಟೆ ಕಾಲೇಜಿನಲ್ಲಿ ದ್ವಿತಿಯ ವರ್ಷದ ವಿಎಲ್‌ಎಸ್‌ಐ ಪದವಿ ವ್ಯಾಸಂಗ ಮಾಡುತ್ತಿದ್ದ. ಈತ ಕಾಲೇಜಿನ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ. ರಜೆಯಲ್ಲಿ ಬೈಂದೂರಿನ ತನ್ನ ಮನೆಗೆ ಬಂದು ಹೋಗುತ್ತಿದ್ದ.

ಫೆ.೨೧ರಂದು ಮನೆಗೆ ಬಂದು ಮರುದಿನ ಮನೆಯಿಂದ ಕಾಲೇಜಿಗೆ ಹೋದವನು ಒಂದೆರಡು ಬಾರಿ ಕರೆ ಮಾಡಿದ್ದನು. ಬಳಿಕ ಸುದ್ದಿ ಇರಲಿಲ್ಲ. ಅದರಂತೆ ಮಹಾಬಲೇಶ್ವರ ಅವರು ಮಾ.26ರಂದು ನಿಟ್ಟೆ ಕಾಲೇಜಿಗೆ ಹೋಗಿ ಮಗನ ಬಗ್ಗೆ ವಿಚಾರಿಸಿದಾಗ ಆತ ರಜೆಯಲ್ಲಿ ಹೋದವ ಕಾಲೇಜಿಗೆ ಬರಲಿಲ್ಲ ಎಂದು ಹೇಳಿದ್ದಾರೆ. ಆತನ ಮೊಬೈಲ್ ಫೋನ್ ಕೂಡ ಆಫ್ ಆಗಿತ್ತು ಎಂದು ತಿಳಿದು ಬಂದಿದೆ.ಇದರ ಬಗ್ಗೆ ಆತನ ತಂದೆ ಬೈಂದೂರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!