Wednesday, June 24, 2026
Homeತಾಜಾ ಸುದ್ದಿಸಿಲಿಕಾನ್ ಸಿಟಿಯಲ್ಲಿ ಮಹಾಲಕ್ಷ್ಮೀ ಕೊಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕೇಸ್ ; ಪತ್ನಿಯನ್ನು ಕೊಂದು...

ಸಿಲಿಕಾನ್ ಸಿಟಿಯಲ್ಲಿ ಮಹಾಲಕ್ಷ್ಮೀ ಕೊಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕೇಸ್ ; ಪತ್ನಿಯನ್ನು ಕೊಂದು ಸೂಟ್ ಕೇಸ್ ನಲ್ಲಿ ತುಂಬಿಟ್ಟ ಪತಿ

- Advertisement -
- Advertisement -

ಬೆಂಗಳೂರು; ಸಿಲಿಕಾನ್ ಸಿಟಿಯಲ್ಲಿ ಮಹಾಲಕ್ಷ್ಮೀ ಕೊಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಭಯಾನಕ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಪಾಪಿ ಪತಿಯೊಬ್ಬ ಪತ್ನಿಯನ್ನು ಕೊಂದು ಸೂಟ್ ಕೇಸ್ ನಲ್ಲಿ ತುಂಬಿಟ್ಟಿದ್ದಾನೆ.

ಬೆಂಗಳೂರಿನ ಹುಳಿಮಾವು ಮನೆಯೊಂದಲ್ಲಿ ಬಾಡಿಗೆ ಇದ್ದ ಮಹಾರಾಷ್ಟ್ರ ಮೂಲದ ರಾಕೇಶ್ ಹಾಗೂ ಗೌರಿ ದಂಪತಿ ನಡುವೆ ಆರಂಭವಾದ ಜಗಳ ಪತ್ನಿ ಕೊಲೆಯಲ್ಲಿ ಅಂತ್ಯವಾಗಿದೆ. ಬಳಿಕ ಆಕೆ ದೇಹವನ್ನು ಟ್ರಾಲಿ ಬ್ಯಾಗ್​​​ ತುಂಬಿಟ್ಟು ಪತಿ ರಾಕೇಶ್ ಪರಾರಿಯಾಗಿದ್ದ.

ಮಹಿಳೆ ಶವ ಪತ್ತೆಯಾದ ಬಗ್ಗೆ ಸ್ಥಳೀಯರು ಹುಳಿಮಾವು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪತಿ ಕೊಲೆ ಮಾಡಿರೋದು ಗೊತ್ತಾಗುತ್ತಿದ್ದಂತೆ ಪೊಲೀಸರು ಸಿಡಿಆರ್​ ಆಧರಿಸಿ ಮಹಾರಾಷ್ಟ್ರದ ಪುಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಆಧರಿಸಿ ಶೋಧಕಾರ್ಯ ನಡೆಸಿದಾಗ ರಾಕೇಶ್ ಪುಣೆಯಲ್ಲಿ ಸಿಕ್ಕಿಬಿದ್ದಿದ್ದಾನೆ. ಸದ್ಯ ಪುಣೆ ಪೊಲಿಸರ ವಶದಲ್ಲಿರುವ ರಾಕೇಶ್ ನನ್ನು ಬೆಂಗಳೂರಿಗೆ ಕರೆತರಲು ಹುಳಿಮಾವು ಪೊಲೀಸರ ತಂಡ ಪುಣೆಗೆ ತೆರಳುತ್ತಿದ್ದು, ಟ್ರಾನ್ಸಿಟ್ ವಾರಂಟ್ ಮೇಲೆ ಆರೋಪಿಯನ್ನು ಬೆಂಗಳೂರಿಗೆ ಕರೆತರಲಿದ್ದಾರೆ. ವಿಚಾರಣೆ ಬಳಿಕ ಕೊಲೆಗೆ ನಿಖರ ಕಾರಣ ತಿಳಿದು ಬರಲಿದೆ.

- Advertisement -

Latest News

error: Content is protected !!