Sunday, June 7, 2026
HomeUncategorizedಉಡುಪಿ : ದರೋಡೆ ಪ್ರಕರಣದ ಆರೋಪಿ ಉಡುಪಿಯಲ್ಲಿ ಪರಾರಿ ಪ್ರಕರಣ: ಗರುಡ ಗ್ಯಾಂಗ್ ಸದಸ್ಯ ಹಾಗೂ...

ಉಡುಪಿ : ದರೋಡೆ ಪ್ರಕರಣದ ಆರೋಪಿ ಉಡುಪಿಯಲ್ಲಿ ಪರಾರಿ ಪ್ರಕರಣ: ಗರುಡ ಗ್ಯಾಂಗ್ ಸದಸ್ಯ ಹಾಗೂ ಪ್ರೇಯಸಿ ವಿರುದ್ಧ ಪ್ರಕರಣ ದಾಖಲು

- Advertisement -
- Advertisement -

ಉಡುಪಿ : ಬೆಂಗಳೂರಿನ ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪುತ್ತೂರು ಉದ್ಯಮಿಯ ಬಳಿ ದರೋಡೆ ಪ್ರಕರಣ ಸಂಬಂಧ ಗರುಡ ಗ್ಯಾಂಗ್ ಕುಖ್ಯಾತ ಸದಸ್ಯ ಇಸಾಕ್ ಉಡುಪಿಯಲ್ಲಿ ಇರುವ ಬಗ್ಗೆ ಮಾಹಿತಿ ಪಡೆದು ಮಾ.4 ರಂದು ರಾತ್ರಿ ನೆಲಮಂಗಲ ಪೊಲೀಸರು ಮತ್ತು ಮಣಿಪಾಲ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ಮಾಡುತ್ತಿದ್ದ ವೇಳೆ ಥಾರ್ ಜೀಪ್ ನಲ್ಲಿ ತಪ್ಪಿಸಿಕೊಂಡು ವಿವಿಧ ವಾಹನಗಳಿಗೆ ಡಿಕ್ಕಿ ಹೊಡೆದು ಬಳಿಕ ವಾಹನದಿಂದ ಹಾರಿ ಪರಾರಿಯಾದ ಘಟನೆ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಇಸಾಕ್ ಪರಾರಿಯಾಗಲು ಬಳಸಿದ ಥಾರ್ ವಾಹನ ಸ್ನೇಹಿತನಿಗೆ ಸೇರಿದ್ದು ಎನ್ನಲಾಗಿದೆ. ಈ ವಾಹನದಲ್ಲಿ ಮಾರಕಾಸ್ತ್ರಗಳು ಪೊಲೀಸರಿಗೆ ಪತ್ತೆಯಾಗಿದೆ. ಆರೋಪಿ ಇಸಾಕ್ ಪತ್ತೆಗಾಗಿ ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ ಎಂದು ಉಡುಪಿ ಎಸ್ಪಿ ತಿಳಿಸಿದ್ದಾರೆ.

ಮಣಿಪಾಲ ಪೊಲೀಸ್ ಠಾಣೆಯಲ್ಲಿ ಮಾ.5 ರಂದು ಬಿ.ಎನ್.ಎಸ್ 109, Arms Act ಅಡಿಯಲ್ಲಿ ಇಬ್ಬರು ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ ಪ್ರೇಯಸಿಯನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಹೆಚ್ಚಿನ ವಿಚಾರಣೆಗಾಗಿ ಮಣಿಪಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

- Advertisement -

Latest News

error: Content is protected !!