Friday, June 5, 2026
Homeಮನರಂಜನೆಕೊರೊನಾಗೆ ಖ್ಯಾತ ಕಿರುತೆರೆ ನಟ ಬಲಿ

ಕೊರೊನಾಗೆ ಖ್ಯಾತ ಕಿರುತೆರೆ ನಟ ಬಲಿ

- Advertisement -
- Advertisement -

ಬೆಂಗಳೂರು : ಕೊರೊನಾ ಅನ್ನೋ ಹೆಮ್ಮಾರಿಯ ರುದ್ರ ನರ್ತನಕ್ಕೆ ಮತ್ತೊಬ್ಬ ಪ್ರತಿಭಾವಂತ ನಟನ ಬಲಿಯಾಗಿದೆ. ಕನ್ನಡದ ಹಿರಿಯ ಪೋಷಕ ನಟ ಹುಲಿವಾನ್ ಗಂಗಾಧರಯ್ಯ (70) ನಿನ್ನೆ ರಾತ್ರಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ ಕೊರೊನಾ ಪಾಸಿಟಿವ್​ ದೃಢಪಟ್ಟು, ಚಿಕಿತ್ಸೆ ಪಡೆಯುತ್ತಿದ್ದರು.

ಕಿರುತೆರೆಯ ಪ್ರೇಮಲೋಕ ಧಾರವಾಹಿಯಲ್ಲಿ ಅವರು ನಟಿಸ್ತಾ ಇದ್ದರು. ಇತ್ತೀಚೆಗೆ ಧಾರಾವಾಹಿಯ ಶೂಟಿಂಗ್​ನಲ್ಲೂ ಅವರು ಭಾಗಿಯಾಗಿದ್ದರು. ಹಲವಾರು ಸಿನಿಮಾ, ಧಾರವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿ ತಮ್ಮದೇ ಆದ ಛಾಪು ಮೂಡಿಸಿದ್ದರು. ರಂಗಭೂಮಿ, ಸಿನಿಮಾ, ಧಾರಾವಾಹಿ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದ ಹುಲಿವನ ಗಂಗಾಧರ್ ತೆಂಗುಬೆಳೆಗಾರರೂ ಆಗಿದ್ದರು.

ಇನ್ನು ಇತ್ತೀಚೆಗೆ ಅವರು ಧಾರಾವಾಹಿಯ ಶೂಟಿಂಗ್ ನಲ್ಲೂ ಭಾಗಿಯಾಗಿದ್ದರಿಂದ ಉಳಿದ ಕಲಾವಿದರು ಕ್ವಾರಂಟೈನ್ ಗೆ ಒಳಗಾಗುವ ಸಾಧ್ಯತೆ ಇದೆ.

- Advertisement -

Latest News

error: Content is protected !!