- Advertisement -


- Advertisement -
ಪುತ್ತೂರು: ಆಟವಾಡುತ್ತಾ ಸಂತಸದಿಂದ ಇರಬೇಕಿದ್ದ ಎರಡು ವರ್ಷದ ಮಗು ಅಸ್ವಸ್ಥಗೊಂಡು ದಿಢೀರ್ ಮೃತಪಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ.
ಆಸ್ಟಿನ್ (2) ಮೃತಪಟ್ಟ ಮಗು.
ಕಫದ ಸಮಸ್ಯೆಯಿಂದ ಬಳಲುತ್ತಿದ್ದ ಆಸ್ಟಿನ್ನನ್ನು ಅಕ್ಟೋಬರ್ 28ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆಯ ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಮಗುವನ್ನು ಮನೆಗೆ ಕರೆತರಲಾಗಿತ್ತು ಎನ್ನಲಾಗಿದೆ.
ಆದರೆ, ಅಕ್ಟೋಬರ್ 29ರಂದು ಮುಂಜಾನೆ ಎಂದಿನಂತೆ ಎದ್ದು ಸ್ವಲ್ಪ ಹೊತ್ತು ಆಟವಾಡುತ್ತಿದ್ದ ಮಗು ಏಕಾಏಕಿ ಅಸ್ವಸ್ಥಗೊಂಡು ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಎರಡು ವರ್ಷದ ಕಂದಮ್ಮನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಗುವಿನ ಅಕಾಲಿಕ ನಿಧನದಿಂದ ಸ್ಥಳೀಯರು ಕೂಡ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ.
- Advertisement -


