Friday, June 5, 2026
HomeUncategorizedವಿಟ್ಲದಲ್ಲಿ ಉದ್ಯಮಿಯ ಮನೆಯಲ್ಲಿ ದರೋಡೆ ಪ್ರಕರಣ; ರಾಬರಿ ಕೇಸ್ ನ ಕಿಂಗ್ ಪಿನ್ ಎಎಸ್‌ಐ ಶಹೀರ್‌ಬಾಬು...

ವಿಟ್ಲದಲ್ಲಿ ಉದ್ಯಮಿಯ ಮನೆಯಲ್ಲಿ ದರೋಡೆ ಪ್ರಕರಣ; ರಾಬರಿ ಕೇಸ್ ನ ಕಿಂಗ್ ಪಿನ್ ಎಎಸ್‌ಐ ಶಹೀರ್‌ಬಾಬು ಅಮಾನತು

- Advertisement -
- Advertisement -

ವಿಟ್ಲದಲ್ಲಿ ಉದ್ಯಮಿಯ ಮನೆಯಲ್ಲಿ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೇಸ್ ನ ಕಿಂಗ್ ಪಿನ್ ಎಎಸ್‌ಐ ಶಹೀರ್‌ಬಾಬು ರನ್ನು ಅಮಾನತು ಮಾಡಲಾಗಿದೆ.  ಕೇರಳ ಪೊಲೀಸ್ ಇಲಾಖೆ ಸೋಮವಾರ ಸಹಾಯಕ ಸಬ್‌ ಇನ್ಸ್‌ಪೆಕ್ಟರ್‌ನನ್ನು ಅಮಾನತುಗೊಳಿಸಿದ್ದಾರೆ.

ಜ.3 ರಂದು ಬಂಟ್ವಾಳ ತಾಲೂಕಿನ ಬೋಳಂತೂರು ನಾರ್ಶದ ಬೀಡಿ ಉದ್ಯಮಿ ಸುಲೈಮಾನ್‌ ಹಾಜಿ ಮನೆ ಮೇಲೆ ಇಡಿ ಅಧಿಕಾರಿಗಳ ಸೋಗಿನಲ್ಲಿ ದಾಳಿ ನಡೆಸಿ ದರೋಡೆ ಮಾಡಲಾಗಿತ್ತು. ತನಿಖೆ ಸಂದರ್ಭ ಪ್ರಕರಣದ ರೂವಾರಿ ಶಹೀರ್‌ಬಾಬು ಅನ್ನೋದು ಗೊತ್ತಾಗಿತ್ತು. ಆತ ನಕಲಿ ತಂಡವನ್ನು ಕಟ್ಟಿಕೊಂಡು ಪ್ಲ್ಯಾನ್‌ ಪ್ರಕಾರ ದರೋಡೆ ಮಾಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಶಹೀರ್‌ ಸೇರಿ ನಾಲ್ವರನ್ನು ವಿಟ್ಲ ಪೊಲೀಸರು ಬಂಧಿಸಿದ್ದರು.

- Advertisement -

Latest News

error: Content is protected !!