Saturday, June 6, 2026
Homeಕರಾವಳಿಉಪ್ಪಿನಂಗಡಿ: ಕ್ರಿಸ್ಮಸ್‌ ಪೂಜೆಗೆ ಹೋಗಿದ್ದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ

ಉಪ್ಪಿನಂಗಡಿ: ಕ್ರಿಸ್ಮಸ್‌ ಪೂಜೆಗೆ ಹೋಗಿದ್ದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ

- Advertisement -
- Advertisement -

ಉಪ್ಪಿನಂಗಡಿ: ಕ್ರಿಸ್ಮಸ್‌ ಪೂಜೆಗೆ ಹೋಗಿದ್ದ ವೇಳೆ ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ನಡೆದಿದೆ.

ಇಲ್ಲಿನ ತಂಗಚ್ಚನ್‌ ಎಂಬವರ ಮನೆಗೆ ನುಗ್ಗಿದ ಕಳ್ಳರು 2.46 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ನಗದನ್ನು ಕದ್ದಿದ್ದಾರೆ.

ಮನೆ ಮಂದಿ ಸಮೀಪದ ಚರ್ಚ್‌ನಲ್ಲಿ ನಡೆದ ಕ್ರಿಸ್ಮಸ್‌ ಪೂಜೆಗೆ ಹೋಗಿದ್ದ ವೇಳೆ ಮುಂಭಾಗದ ಬಾಗಿಲ ಚಿಲಕ ಮುರಿದು ಒಳ ನುಗ್ಗಿದ ಕಳ್ಳರು ಮನೆಯ ಕಪಾಟಿನಲ್ಲಿದ್ದ 78 ಸಾವಿರ ರೂ.ನಗದು ಸಹಿತ 42 ಗ್ರಾಮ್‌ ತೂಕದ ವಿವಿಧ ಚಿನ್ನದ ಆಭರಣಗಳನ್ನು ಕದ್ದಿದ್ದಾರೆ. ಈ ಬಗ್ಗೆ ಉಪ್ಪಿನಂಗಡಿ ಠಾಣೆಗೆ ದೂರು ನೀಡಲಾಗಿದೆ.

- Advertisement -

Latest News

error: Content is protected !!