Saturday, June 6, 2026
Homeಕರಾವಳಿಬೆಳ್ತಂಗಡಿ ವಕೀಲರ ಸಂಘದಿಂದ ಕಾನೂನು ಮಾಹಿತಿ ಕಾರ್ಯಾಗಾರ

ಬೆಳ್ತಂಗಡಿ ವಕೀಲರ ಸಂಘದಿಂದ ಕಾನೂನು ಮಾಹಿತಿ ಕಾರ್ಯಾಗಾರ

- Advertisement -
- Advertisement -

ಬೆಳ್ತಂಗಡಿ ವಕೀಲರ ಸಂಘದಿಂದ ಇಂಪಾರ್ಟೆನ್ಸ್ ಆಫ್ ಫಾರೆನ್ಸಿಕ್ಸ್ ಇನ್ ಲಿಟಿಗೇಷನ್ ಕಾನೂನು ಮಾಹಿತಿ ನಡೆಯಿತು.

ಬೆಳ್ತಂಗಡಿ ವಕೀಲರ ಸಂಘ ಮತ್ತು ಕ್ಲೂ ಫೋರ್ ಎವಿಡೆನ್ಸ್ ಫಾರೆನ್ಸಿಕ್ ಲ್ಯಾಬ್ ಬೆಂಗಳೂರು ಇದರ ಸಹಯೋಗದಲ್ಲಿ ಇಂಪಾರ್ಟೆನ್ಸ್ ಆಫ್ ಫಾರೆನ್ಸಿಕ್ಸ್ ಇನ್ ಲಿಟಿಗೇಷನ್ ಎಂಬ ವಿಷಯದ ಬಗ್ಗೆ ವಕೀಲರಿಗೆ ಕಾನೂನು ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕ್ಲೂ ಫೋರ್ ಎವಿಡೆನ್ಸ್ ಫಾರೆನ್ಸಿಕ್ ಲ್ಯಾಬ್ ಬೆಂಗಳೂರು ಇದರ ನಿರ್ದೇಶಕರಾದ ಶ್ರೀ ಫನೀ0ದರ್ ಬಿ ಎನ್ ಇವರು ಈ ಕಾನೂನಿನ ಬಗ್ಗೆ ಅರ್ಥವತ್ತಾಗಿ ಬಹಳ ಉಪಯುಕ್ತ ಮಾಹಿತಿಯನ್ನು ನೀಡಿದರು.

ಬೆಳ್ತಂಗಡಿ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ವಸಂತ ಮರಕಡ ಇವರು ಈ ಕಾರ್ಯಾಗಾರ ದ ಅಧ್ಯಕ್ಷತೆಯನ್ನು ವಹಿಸಿದ್ದರು.

ವೇದಿಕೆಯಲ್ಲಿ ಬೆಳ್ತಂಗಡಿ ಹಿರಿಯ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಮನು ಬಿ ಕೆ, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಸಂದೇಶ್ ಕೆ ಮತ್ತು ಹೆಚ್ಚುವರಿ ನ್ಯಾಯಾಧೀಶರಾದ ಶ್ರೀ ವಿಜಯೇಂದ್ರ ಟಿ ಹೆಚ್ ಉಪಸ್ಥಿತರಿದ್ದರು.

ಈ ಕಾರ್ಯಗಾರದಲ್ಲಿ ಬೆಳ್ತಂಗಡಿಯ ವಕೀಲರ ಸಂಘದ ಪದಾಧಿಕಾರಿಗಳು, ನ್ಯಾಯವಾದಿಗಳು, ಅಪರ ಸರ್ಕಾರಿ ವಕೀಲರಾದ ಶ್ರೀ ಮನೋಹರ್ ಕುಮಾರ್ ಎ , ಸರಕಾರಿ ವಕೀಲರು, ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.

ಕಾರ್ಯಗಾರದ ನಿರೂಪಣೆಯನ್ನು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ನವೀನ್ ಬಿ.ಕೆ ಇವರು ನಿರ್ವಹಿಸಿದರು.

- Advertisement -

Latest News

error: Content is protected !!