- Advertisement -
![]()
- Advertisement -
ಚಿಕ್ಕಮಗಳೂರು: ಇಲ್ಲಿನ ಕೊಪ್ಪ ತಾಲೂಕಿನ ಮರಕಟ್ಟೆ ಗ್ರಾಮದ ವೃದ್ಧೆಯೊಬ್ಬರು 60 ಅಡಿ ಆಳದ ಬಾವಿಗೆ ಕಾಲು ಜಾರಿಬಿದ್ದ ಘಟನೆ ನಡೆದಿದೆ.
94 ವರ್ಷದ ವೃದ್ಧೆ ಕಾಲು ಜಾರಿ ಬಾವಿಗೆ ಬಿದ್ದಿದ್ದು, ಅವರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದಾರೆ.
ಘಟನೆಯ ವಿವರ: ಗ್ರಾಮದ 94 ವರ್ಷದ ವೃದ್ಧೆ ಕಮಲ ಎಂಬವರು ಕಾಲು ಜಾರಿ ಬಾವಿಗೆ ಬಿದ್ದಿದ್ದು, ಒಂದು ಗಂಟೆಗೂ ಹೆಚ್ಚಿನ ಕಾಲ ನೀರಿನಲ್ಲಿ ಮುಳುಗದಂತೆ ಬಾವಿಯೊಳಗೆ ಪೈಪ್ ಹಿಡಿದುಕೊಂಡು ನೇತಾಡಿದ್ದಾರೆ. ನಂತರ ವಿಷಯದ ತಿಳಿದ ಮನೆಯವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳದವರು ಧಾವಿಸಿದ್ದು, ವೃದ್ಧೆಯನ್ನು ಸಿಬ್ಬಂದಿ ವಿಶ್ವನಾಥ ಅವರು ಹಗ್ಗದ ಸಹಾಯದಿಂದ ಮೇಲೆತ್ತಿದ್ದಾರೆ ಎನ್ನಲಾಗಿದೆ.
- Advertisement -


