Sunday, June 7, 2026
Homeಚಿಕ್ಕಮಗಳೂರುನಾಯಿ ದಾಳಿಯಿಂದ 5 ವರ್ಷದ ಬಾಲಕಿಗೆ ಗಾಯ

ನಾಯಿ ದಾಳಿಯಿಂದ 5 ವರ್ಷದ ಬಾಲಕಿಗೆ ಗಾಯ

- Advertisement -
- Advertisement -

ಕೊಟ್ಟಿಗೆಹಾರ: ಬಗ್ಗಸಗೋಡು ಗ್ರಾಮದ 5 ವರ್ಷದ ಬಾಲಕಿಯೊಬ್ಬಳು ನಾಯಿ ದಾಳಿ ನಡೆಸಿದ ಪರಿಣಾಮವಾಗಿ ಗಾಯಗೊಂಡ ಘಟನೆ ನ.29ರ ಶುಕ್ರವಾರ ನಡೆದಿದೆ.

ದಾಳಿಯಿಂದ ಗಾಯಗೊಂಡ ಬಾಲಕಿ ಸಹನಾ ಎಂದು ಗುರುತಿಸಲಾಗಿದೆ.

ಸಹನಾ ನಾಯಿ ದಾಳಿ ಮಾಡಿದಾಗ ಮನೆಯ ಮುಂಭಾಗದಲ್ಲಿ ಎಂದಿನಂತೆ ಅಟವಾಡುತ್ತಿದ್ದಳು ಎನ್ನಲಾಗಿದೆ. ದಾಳಿಯಲ್ಲಿ ಮಗುವಿನ ಕೆನ್ನೆ, ಕಣ್ಣಿನ ಭಾಗದಲ್ಲಿ ಗಾಯವಾಗಿದೆ. ಅದೃಷ್ಟವಶಾತ್ ಮಗುವಿನ ಕಿರುಚಾಟ ಕೇಳಿ ಪಾಲಕರು ತಕ್ಷಣಕ್ಕೆ ಬಂದ ಕಾರಣ ನಾಯಿಯಿಂದ ಮಗುವನ್ನು ರಕ್ಷಿಸಿ, ಆಗಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ.

ಇನ್ನು ಈ ಕುರಿತಂತೆ ಸಹನಾ ತಂದೆ ಸುಂದ್ರೇಶ್ ಪ್ರತಿಕ್ರಯಿಸಿ, ‘ರಸ್ತೆಯಲ್ಲಿ ಸಾಕು ನಾಯಿಗಳ ಹಾಗೂ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು, ನಾಯಿಗಳು ರಸ್ತೆಯಲ್ಲಿ ಹೋಗುವ ಜನರ ಮೇಲೆ ದಾಳಿ ಮಾಡುತ್ತಿವೆ. ಜನಪ್ರತಿನಿದಿನಗಳು, ಅಧಿಕಾರಿಗಳು ಮುಂದೆ ಈ ರೀತಿಯ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕು,’ ಎಂದು ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!