Sunday, June 14, 2026
Homeಅಪರಾಧಮನೆ ಮಾಲೀಕ ಮನೆಯಲ್ಲಿದ್ದ ವೇಳೆಯಲ್ಲೇ  ಕಳ್ಳತನ; ರಾಮಭಜನೆ ಮಾಡುತ್ತಿದ್ದಾಗಲೇ ಮನೆಗೆ ನುಗ್ಗಿ ಲಕ್ಷಾಂತರ ದೋಚಿದ ಕಳ್ಳ 

ಮನೆ ಮಾಲೀಕ ಮನೆಯಲ್ಲಿದ್ದ ವೇಳೆಯಲ್ಲೇ  ಕಳ್ಳತನ; ರಾಮಭಜನೆ ಮಾಡುತ್ತಿದ್ದಾಗಲೇ ಮನೆಗೆ ನುಗ್ಗಿ ಲಕ್ಷಾಂತರ ದೋಚಿದ ಕಳ್ಳ 

- Advertisement -
- Advertisement -

ಬೆಂಗಳೂರು: ಕಳ್ಳನೋರ್ವಮನೆ ಮಾಲೀಕರು ಮನೆಯಲ್ಲಿದ್ದ ವೇಳೆಯಲ್ಲೇ ನುಗ್ಗಿ ಮನೆಯಲ್ಲಿದ್ದ ಲಕ್ಷಾಂ ತರ ರೂ. ಮೌಲ್ಯದ ಚಿನ್ನಾ ಭರಣ ಮತ್ತು ಸಾವಿರಾರು ರೂ. ನಗದು ದೋಚಿದ್ದ ಘಟನೆ ನಡೆದಿದ್ದು, ಆರೋಪಿಯನ್ನು ಶಂಕರಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಸವನ ಗುಡಿಯ ಉತ್ತರಾಧಿಮಠ ರಸ್ತೆಯಲ್ಲಿರುವ ಸಮೀರ್‌ ಆರ್‌. ಕಟ್ಟಿ ಎಂಬುವರ ಮನೆಯಲ್ಲಿ ಸೆ.28 ರಂದು ಸಂಜೆ 4 ಗಂಟೆ ಸುಮಾರಿಗೆ ಏಕಾದಶಿ ಪ್ರಯುಕ್ತ ಸಮೀರ್‌ ಅವರ ತಾಯಿ ಹಾಗೂ ಅವರ ಸ್ನೇಹಿತೆಯರು ಅಡುಗೆ ಕೋಣೆಯಲ್ಲಿ ರಾಮಭಜನೆ ಮಾಡುತ್ತಿದ್ದರು. ಸಮೀರ್‌ ಮೊದಲನೇ ಮಹಡಿಯಲ್ಲಿರುವ ತಮ್ಮ ಕೋಣೆಯಲ್ಲಿದ್ದರು. ಈ ವೇಳೆಯಲ್ಲಿ ಮನೆಗೆ  ಕಳ್ಳನೋರ್ವ ನುಗ್ಗಿ, 12 ಗ್ರಾಂ ಚಿನ್ನದ ಉಂಗುರ, 8 ಗ್ರಾಂನ ಒಂದು ಚಿನ್ನದ ನಾಣ್ಯ ಮತ್ತು 67 ಸಾವಿರ ರೂ. ನಗದು ದೋಚಿ ಪರಾರಿ ಯಾಗಿದ್ದಾನೆ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಇನ್ನು ಆರೋಪಿಯ ಚಲನವಲನ ಮನೆಯಲ್ಲಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತುಎಂದು ಪೊಲೀಸರು ಹೇಳಿದರು.

ಪ್ರಕರಣದ ಕುರಿತಂತೆ ಮಾತನಾಡಿದ ಲೋಕೇಶ್‌ ಜಗಲಾಸರ್‌, ದಕ್ಷಿಣ ವಿಭಾಗ ಡಿಸಿಪಿ, “ಸಾರ್ವಜನಿಕರು ಹಗಲು ಅಥವಾ ರಾತ್ರಿ ವೇಳೆ ಮಲಗುವಾಗ ಮರೆಯದೇ ಮನೆಯ ಬಾಗಿಲು ಹಾಗೂ ಕಿಟಕಿ ಚಿಲಕ ಹಾಕಿಕೊಂಡು ಮಲಗಬೇಕು. ಸಾರ್ವಜನಿಕರು ಈ ಕುರಿತಂತೆ ಎಚ್ಚೆತ್ತುಕೊಳ್ಳದೇ ಇದ್ದರೆ ಕಳ್ಳರು ಮನೆ ಪ್ರವೇಶಿಸಿ ನಗದು ಆಭರಣ ದೋಚುತ್ತಾರೆ. ಒಂದು ವೇಳೆ ಮನೆಬಿಟ್ಟು ಹಲವು ದಿನಗಳ ಕಾಲ ಊರುಗಳಿಗೆ ಹೋಗಬೇಕಾದರೆ ಪೊಲೀಸರಿಗೆ ಮಾಹಿತಿ ನೀಡಿದರೆ ಸೂಕ್ತ,” ಎಂದರು. 

- Advertisement -

Latest News

error: Content is protected !!