Wednesday, June 3, 2026
Homeಕರಾವಳಿಮಂಗಳೂರುಮಂಗಳೂರು: ಬೀಚ್ ರೆಸಾರ್ಟ್ ಈಜುಕೊಳದಲ್ಲಿ ವಿದ್ಯಾರ್ಥಿನಿಯರು ಸಾವು ಪ್ರಕರಣ; ಕುಟುಂಬಸ್ಥರಿಗೆ ಮೃತ ದೇಹಗಳ ಹಸ್ತಾಂತರ

ಮಂಗಳೂರು: ಬೀಚ್ ರೆಸಾರ್ಟ್ ಈಜುಕೊಳದಲ್ಲಿ ವಿದ್ಯಾರ್ಥಿನಿಯರು ಸಾವು ಪ್ರಕರಣ; ಕುಟುಂಬಸ್ಥರಿಗೆ ಮೃತ ದೇಹಗಳ ಹಸ್ತಾಂತರ

- Advertisement -
- Advertisement -

ಮಂಗಳೂರು: ಉಚ್ಚಿಲದ ಬೀಚ್ ರೆಸಾರ್ಟ್ ನ ಈಜು ಕೊಳ ದಲ್ಲಿ ಮುಳುಗಿ ಮೃತಪಟ್ಟಿದ್ದ ಮೂವರು ವಿದ್ಯಾರ್ಥಿನಿಯರ ಮೃತದೇಹಗಳನ್ನು ಪೋಷಕರಿಗೆ ಹಸ್ತಾಂತರಿಸಲಾಗಿದೆ.

ನಿನ್ನೆ ರಾತ್ರಿಯೇ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಬಳಿಕ ಪೋಷಕರಿಗೆ ಮೃತದೇಹಗಳನ್ನು ಪೊಲೀಸರು ಹಸ್ತಾಂತರ ಮಾಡಿದ್ದಾರೆ.

ನಂತರ ತಡ ರಾತ್ರಿಯೇ ಮೃತ ದೇಹಗಳೊಂದಿಗೆ ಮೃತ ಯುವತಿಯರ ಕುಟುಂಬಸ್ಥರು ಮೈಸೂರಿಗೆ ತೆರಳಿದ್ದಾರೆ.ಈ ಮಧ್ಯೆ ಪ್ರಕರಣದ ತನಿಖೆ ಮುಗಿಯುವವರೆಗೂ ಬೀಚ್ ರೆಸಾರ್ಟ್ ಅನ್ನು ಸೀಲ್ ಡೌನ್ ಮಾಡಲು ಮಂಗಳೂರು ಎಸಿ ಹರ್ಷವರ್ಧನ್ ಸೂಚಿಸಿದ್ದು, ಉದ್ದಿಮೆ ಪರವಾನಗಿಯನ್ನು ಉಳ್ಳಾಲ ಪುರಸಭೆ ರದ್ದುಗೊಳಿಸಿದೆ.

ನಿನ್ನೆ ಬೆಳಗ್ಗೆ ನಡೆದ ದುರ್ಘಟನೆಯಲ್ಲಿ ಉಚ್ಚಿಲದ ಬೀಚ್ ರೆಸಾರ್ಟ್ ನ ಈಜುಕೊಳಕ್ಕೆ ಇಳಿದಿದ್ದ ಮೈಸೂರು ಮೂಲಕ ಮೂವರು ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯರು ಮುಳುಗಿ ಸಾವನ್ನಪ್ಪಿದ್ದರು.

- Advertisement -

Latest News

error: Content is protected !!