Monday, June 8, 2026
Homeಕರಾವಳಿಮಂಗಳೂರುಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ವಕೀಲ ನಾರಾಯಣ ಸ್ವಾಮಿ ಭೇಟಿ

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ವಕೀಲ ನಾರಾಯಣ ಸ್ವಾಮಿ ಭೇಟಿ

- Advertisement -
- Advertisement -

ಬೆಳ್ತಂಗಡಿ : ಖ್ಯಾತ ವಕೀಲ ಬೆಂಗಳೂರಿನ ನಾರಾಯಣ ಸ್ವಾಮಿ ಜೀ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನ.18 ರಂದು ಬೆಳಗ್ಗೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದರು.

ಮುತ್ತಪ್ಪ ರೈ ಮೃತಪಟ್ಟ ಬಳಿಕ ಎರಡನೇ ಪತ್ನಿ ಮತ್ತು ಮಕ್ಕಳ ವಿರುದ್ಧ ಆಸ್ತಿ ವಿಚಾರದಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು‌. ವರ್ಷಗಳ ಬಳಿಕ ವಕೀಲ ನಾರಾಯಣ ಸ್ವಾಮಿ ಮಧ್ಯಸ್ಥಿಕೆ ನಡೆಸಿ ಎರಡನೇ ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆ ಆಸ್ತಿ ವಿಚಾರದಲ್ಲಿ ಎರಡನೇ ಪತ್ನಿಗೆ ಸುಮಾರು 100 ಕೋಟಿ ರೂಪಾಯಿ ಪಾಲು ಮಾಡಿಸಿ ಕೋರ್ಟ್ ಪ್ರಕರಣ ರಾಜಿಯಲ್ಲಿ ಮುಗಿಸಿದ್ದರು. ಈ ಬಳಿಕ ನಾರಾಯಣ ಸ್ವಾಮಿ ಮತ್ತಿತರರು ಧರ್ಮಸ್ಥಳ , ಕುಕ್ಕೆ ಸುಬ್ರಮಣ್ಯ, ಸೌತಡ್ಕ ದೇವಸ್ಥಾನಗಳಿಗೆ ಭೇಟಿ ನೀಡಿದ್ದಾರೆ.

ದರ್ಶನ ಬಳಿಕ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.ಖ್ಯಾತ ವಕೀಲ ನಾರಾಯಣ್ ಸ್ವಾಮಿ ಜೊತೆಯಲ್ಲಿ ಶಿವಣ್ಣ ,ಶೇಷ ಕುಮಾರ್, ನಿರಂಜನ್, ಮಂಜುನಾಥ್ ಹಾಗೂ ಚಾಲಕ ಯಾಶೀನ್ ಭಾಗಿಯಾಗಿದ್ದರು.

- Advertisement -

Latest News

error: Content is protected !!