Saturday, June 13, 2026
Homeತಾಜಾ ಸುದ್ದಿಪತಿ ನಿಧನದ ಇಪ್ಪತ್ತೇ ನಿಮಿಷದಲ್ಲಿ ಪತ್ನಿ ಕೂಡ ವಿಧಿವಶ, ಸಾವಿನಲ್ಲೂ ಒಂದಾದ ದಂಪತಿ

ಪತಿ ನಿಧನದ ಇಪ್ಪತ್ತೇ ನಿಮಿಷದಲ್ಲಿ ಪತ್ನಿ ಕೂಡ ವಿಧಿವಶ, ಸಾವಿನಲ್ಲೂ ಒಂದಾದ ದಂಪತಿ

- Advertisement -
- Advertisement -

ಬೆಂಗಳೂರು: ಮದುವೆಯ ಬಂಧವೇ ಅಂಥದ್ದು, ಸಪ್ತಪದಿ ತುಳಿಯುವಾಗಲೇ ಜೀವನದ ಕಷ್ಟ-ಸುಖ-ದುಃಖ,ನೋವು-ಸಾವುಗಳಲ್ಲಿ ನಾವಿಬ್ಬರೂ ಜೊತೆಯಾಗಿರುತ್ತೇವೆ ಎಂಬ ಭಾವನೆಯೊಂದಿಗೆ ಹೊಸ ಜೀವನಕ್ಕೆ ಕಾಲಿಟ್ಟಿರುತ್ತಾರೆ. ಅಂತೆಯೇ ಐದು ದಶಕಗಳ ಹಿಂದೆ ವಿವಾಹ ಬಂಧನಕ್ಕೆ ಕಟ್ಟುಬಿದ್ದಿದ್ದ ಬೆಂಗಳೂರಿನ ವೃದ್ಧ ದಂಪತಿಗಳಿಬ್ಬರು ಸಾವಿನಲ್ಲೂ ಒಂದಾಗಿದ್ದಾರೆ.

ಬೆಂಗಳೂರಿನ ಕುರುಬರಹಳ್ಳಿಯ ಜೆ.ಸಿ.ನಗರದ ಶಂಕರಮಠದ ಬಳಿ 75 ವರ್ಷದ ಆನಾರೋಗ್ಯ ಪೀಡಿತರಾಗಿದ್ದ ವೃದ್ದರೊಬ್ಬರು ಸರಿಯಾದ ಸಮಯಕ್ಕೆ ವೈದ್ಯಕೀಯ ಚಿಕಿತ್ಸೆ ಸಿಗದೇ ಅಸುನೀಗಿದ್ದಾರೆ, ಗಂಡನ ಸಾವನಿಂದ ದುಃಖತಪ್ತರಾದ ಪತ್ನಿ, ತಮ್ಮ ಪತಿ ಸತ್ತ 20 ನಿಮಿಷಗಳ ಅಂತರದಲ್ಲೇ ಮೃತಪಟ್ಟಿದ್ದಾರೆ. ಐದು ದಶಕಗಳ ಕಾಲ ಸಂಸಾರ ಜೀವನ ನಡೆಸಿದ್ದ ದಂಪತಿಗಳು ಸಾವಿನಲ್ಲೂ ಜೊತೆಯಾಗಿದ್ದಾರೆ.

- Advertisement -

Latest News

error: Content is protected !!