Saturday, May 11, 2024
Homeಮನರಂಜನೆಮತ್ತೆ ಕಿರುತೆರೆಯಲ್ಲಿ ಮ್ಯಾಜಿಕ್ ಮಾಡಲಿದ್ದಾರೆ ಜೆಕೆ

ಮತ್ತೆ ಕಿರುತೆರೆಯಲ್ಲಿ ಮ್ಯಾಜಿಕ್ ಮಾಡಲಿದ್ದಾರೆ ಜೆಕೆ

spot_img
- Advertisement -
- Advertisement -

ಬೆಂಗಳೂರು :  ಅಶ್ವಿನಿ ನಕ್ಷತ್ರ. ಈ ಧಾರಾವಾಹಿ ಕನ್ನಡ ಚಿತ್ರರಂಗಕ್ಕೆ ಮಯೂರಿ ಅನ್ನೋ ನಟಿಯೊಬ್ಬಳನ್ನು ಪರಿಚಯಿಸಿದ್ರೆ ಮತ್ತೊಂದು ಕಡೆ ಇದೇ ಧಾರಾವಾಹಿ ಮೂಲಕ ಎಲ್ಲರ ಮನೆ ಮನಗಳಿಗೆ ಹತ್ತಿರವಾದವರು ಜೆಕೆ ಅಲಿಯಾಸ್ ಕಾರ್ತಿಕ್ ಜೈರಾಮ್.

ಧಾರಾವಾಹಿಯಲ್ಲಿ ಅವರು ಅಶ್ವಿನಿ‌ಯನ್ನು “ಹೆಂಡ್ತಿ” ಎಂದು ಕರೆಯುತ್ತಿದ್ದ ರೀತಿಯೂ ಕೂಡ ಅಷ್ಟೇ ಫೇಮಸ್.. ಆ ಧಾರಾವಾಹಿಯ ನಂತರ ನಟಿ ಮಯೂರಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿ ಅಜಯ್ ರಾವ್ ಜೊತೆಗೆ ಕೃಷ್ಣ ಲೀಲಾ ಸಿನಿಮಾ ಮಾಡಿದರು.. ಮೊದಲ ಸಿನಿಮಾದಲ್ಲಿಯೇ ಸಕ್ಸಸ್ ಕೂಡ ಆದರು.. ಇನ್ನು ಅನೇಕ ಸಿನಿಮಾಗಳಲ್ಲಿ ನಟಿಸಿರುವ ಮಯೂರಿ ಸ್ಯಾಂಡಲ್ವುಡ್ ನಲ್ಲಿ ಬ್ಯುಸಿ ಆದರು..

ಅತ್ತ ಜೆಕೆ ಕೂಡ ಕೆಲವೊಂದಿಷ್ಟು ಸಿನಿಮಾ ಹಾಗೂ ಬೇರೆ ಭಾಷೆಯಲ್ಲಿ ಧಾರಾವಾಹಿ.. ಆನಂತರ ಬಿಗ್ ಬಾಸ್ ಗೆ ಎಂಟ್ರಿ ಪಡೆದಿದ್ದರು.. ಇನ್ನು ಕೆಲ ತಿಂಗಳ ಹಿಂದಷ್ಟೇ ಜೀ ವಾಹಿನಿಯ ನಾಗಿಣಿ ಧಾರಾವಾಹಿಯಲ್ಲಿ ನಾಗರಾಜನ ಪಾತ್ರ ನಿರ್ವಹಿಸಿದ್ದರು. ಇದೀಗ ಮತ್ತೊಮ್ಮೆ ಕಿರುತೆರೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ.. ಹೌದು ಆದರೆ ಹೊಸ ಧಾರಾವಾಹಿಯಲ್ಲ.. ಬದಲಿಗೆ ಜೆಕೆ ಅವರಿಗೆ ದೊಡ್ಡ ಸಕ್ಸಸ್ ನೀಡಿದ ಹಿಂದಿಯ ಸಿಯಾ ಕೆ ರಾಮ್ ಧಾರಾವಾಹಿ ಮೂಲಕ.

 ಹೌದು.. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸಾಲು ಸಾಲು ಹಿಂದಿ ಧಾರಾವಾಹಿಗಳು ಡಬ್ ಆಗುತ್ತಿದ್ದು, ಒಳ್ಳೆಯ ರೇಟಿಂಗ್ ಸಹ ಪಡೆದುಕೊಳ್ಳುತ್ತಿದೆ.. ಅದೇ ಕಾರಣಕ್ಕಾಗಿ ಇದೀಗ ಹಿಂದಿಯಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆದ ಸಿಯಾ ಕೆ ರಾಮ್ ಧಾರಾವಾಹಿಯನ್ನು.. ಸೀತಾರಾಮ ಧಾರಾವಾಹಿಯಾಗಿ ಡಬ್ ಮಾಡಿ ಪ್ರಸಾರ ಮಾಡಲಾಗುತ್ತದೆ.  ಈ ಕುರಿತು ಜೆಕೆ ಅವರೂ ಸಹ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಸರ್ಪ್ರೈಸ್ ನೀಡುವುದಾಗಿ ಹೇಳಿದ್ದು, ಬರುವ ಸೋಮವಾರದಿಂದ ಪ್ರತಿ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ ಎನ್ನಲಾಗುತ್ತಿದೆ..

- Advertisement -
spot_img

Latest News

error: Content is protected !!