Saturday, June 6, 2026
HomeUncategorizedಪ್ಲೀಸ್ ! ನಮಗೆ ಜೈಲಿನಲ್ಲಿ ತಂಬಾಕು ಕೊಡಿ, ಇಲ್ಲದಿದ್ದರೆ ಇಲ್ಲಿರೋಕೆ ಕಷ್ಟ ಆಗುತ್ತೆ; ಜಡ್ಜ್ ಬಳಿ...

ಪ್ಲೀಸ್ ! ನಮಗೆ ಜೈಲಿನಲ್ಲಿ ತಂಬಾಕು ಕೊಡಿ, ಇಲ್ಲದಿದ್ದರೆ ಇಲ್ಲಿರೋಕೆ ಕಷ್ಟ ಆಗುತ್ತೆ; ಜಡ್ಜ್ ಬಳಿ ಕಾರವಾರ ಜೈಲಿನ ಕೈದಿಗಳು ಮನವಿ

- Advertisement -
- Advertisement -

ತ್ತರಕನ್ನಡ : ಪ್ಲೀಸ್ ! ನಮಗೆ ಜೈಲಿನಲ್ಲಿ ತಂಬಾಕು ಕೊಡಿ, ಇಲ್ಲದಿದ್ದರೆ ಇಲ್ಲಿರೋಕೆ ಕಷ್ಟ ಆಗುತ್ತೆ ಎಂದು ಕೈದಿಗಳು ಜಡ್ಜ್ ಮನವಿ ಮಾಡಿದ ಘಟನೆ ಕಾರವಾರ ಜೈಲಿನಲ್ಲಿ ನಡೆದಿದೆ.

ನಮಗೆ ತಂಬಾಕು ನೀಡಲು ವ್ಯವಸ್ಥೆ ಮಾಡಿ. ತಂಬಾಕು ಇಲ್ಲದಿದ್ದರೆ ಜೈಲಲ್ಲಿ ನಮಗೆ ಇರೋಕೆ ಕಷ್ಟ ಆಗುತ್ತೆ. ಹಾಗಾಗಿ ನಮಗೆ ತುಂಬಾಕು ನೀಡಿ ಎಂದು ಕಾರವಾರದ ಸಿಜೆ ಕೋರ್ಟ್ ನ ನ್ಯಾಯಾಧೀಶರ ಎದುರು ಮನವಿ ಮಾಡಿದ್ದಾರೆ. ಆಗಸ್ಟ್ 29 ರಂದು ತಂಬಾಕಿಗಾಗಿ ಕೈದಿಗಳು ಧರಣಿ ಮಾಡಿದ್ದರು. ಸುಮಾರು 20 ಕೈದಿಗಳು ಗಲಾಟೆ ಮಾಡಿದ್ದರು.

ಕೇವಲ ಕಾರವಾರ ಅಷ್ಟೆ ಅಲ್ಲದೆ ಶಿವಮೊಗ್ಗ ಕೇಂದ್ರ ಕಾರಗೃಹದಲ್ಲಿ ಜೈಲಿನಲ್ಲಿ ಕೈದಿಗಳು ಪ್ರತಿಭಟನೆ ನಡೆಸಿದ್ದಾರೆ. ಬೀಡಿ ಸಿಗುತ್ತಿಲ್ಲ ಎಂದು ಕೈದಿಗಳು ಪಟ್ಟು ಹಿಡಿದಿದ್ದಾರೆ.ಸೋಗಾನೆ ಬಳಿ ಇರುವ ಕೇಂದ್ರ ಕಾರಾಗೃಹದಲ್ಲಿಯೂ ದರ್ಶನ್ ಪ್ರಕರಣದ ನಂತರ ಜೈಲು ವ್ಯವಸ್ಥೆಯನ್ನು ಕಠಿಣ ಮಾಡಲಾಗಿದೆ. ಹೀಗಾಗಿ ಇದೀಗ ಬೀಡಿ ನೀಡದ ಹಿನ್ನೆಲೆಯಲ್ಲಿ ಕೈದಿಗಳು ಬೀಡಿ ನೀಡಲು ಆಗ್ರಹಿಸುತ್ತಿದ್ದಾರೆ.

- Advertisement -

Latest News

error: Content is protected !!