Saturday, June 6, 2026
Homeತಾಜಾ ಸುದ್ದಿನನ್ನ ಅಭಿಮಾನಿಗಳು ನನ್ನ ಗೌರವಕ್ಕ ಧಕ್ಕೆ ತರುವ ಕೆಲಸ ಮಾಡಲ್ಲ; ಬರ್ತಡೇ ಆಚರಣೆ ವೇಳೆ ನಟ...

ನನ್ನ ಅಭಿಮಾನಿಗಳು ನನ್ನ ಗೌರವಕ್ಕ ಧಕ್ಕೆ ತರುವ ಕೆಲಸ ಮಾಡಲ್ಲ; ಬರ್ತಡೇ ಆಚರಣೆ ವೇಳೆ ನಟ ಸುದೀಪ್ ಹೇಳಿಕೆ

- Advertisement -
- Advertisement -

ಬೆಂಗಳೂರು : ಇಂದು ನಟ ಕಿಚ್ಚ ಸುದೀಪ್ ಅವರು ತಮ್ಮ 51ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡ್ರು. ಬರ್ತಡೇ ಹಿನ್ನೆಲೆ ಬೆಂಗಳೂರಿನ ಜಯನಗರದಲ್ಲಿರುವ ಎಂಇಎಸ್ ಮೈದಾನದಲ್ಲಿ ಫ್ಯಾನ್ಸ್ ಸಾವಿರಾರು ಫ್ಯಾನ್ಸ್ ನ ಕಿಚ್ಚ ಭೇಟಿಯಾದ್ರು.

ಈ ವೇಳೆ ಮಾತನಾಡಿದ ಅವರು, ನಾನು ಸಂಪಾದನೆ ಮಾಡಿರುವ ಹೆಸರಿಗೆ ಕಳಂಕ ತರುವ ಕೆಲಸವನ್ನು ನನ್ನ ಫ್ಯಾನ್ಸ್ ಎಂದು ಮಾಡಿಲ್ಲ ಎಂದು ತಿಳಿಸಿದರು.ನನ್ನಿಂದ ಅವರು ಒಳ್ಳೆಯ ಕೆಲಸ ಮಾಡುತ್ತಾರೆ. ಅವರು ಮಾಡಿರೋ ಕೆಲಸ ಅವರ ತಂದೆ ತಾಯಿಗೆ, ಊರಿನವರಿಗೆ ಈ ಶ್ರೇಯಸ್ಸು ಸಲ್ಲುತ್ತದೆ. ನಾವು ಬೆಳೆಯುತ್ತೇವೆ ಅನ್ನೋದು ತಪ್ಪಲ್ಲ. ಯಾವ ವಾತಾವರಣದಲ್ಲಿ ಬೆಳೆಯುತ್ತೇವೆ ಅನ್ನೋದು ಮುಖ್ಯವಾಗುತ್ತದೆ. ಅವರು ಒಳ್ಳೆಯ ಕೆಲಸ ಮಾಡ್ತಿರೋದು ನಾನು ಹೇಳಿದೆ ಅಂತಲ್ಲ, ಅವರಲ್ಲಿ ಒಳ್ಳೆತನ ಇದೆ. ಅದಕ್ಕಾಗಿ ನಾವಿಷ್ಟು ಒಳ್ಳೆಯವರು ಎಂದಿದ್ದಾರೆ ಸುದೀಪ್.

ನಾನು ಮೇಕಪ್​ ಹಾಕೋದು ಅಭಿಮಾನಿಗಳಿಗೋಸ್ಕರ. ಎಲ್ಲಿಯವರೆಗೆ ನೋಡೋಕೆ ಇಷ್ಟಪಡುತ್ತಿರೋ ಅಲ್ಲಿಯವರೆಗೆ ನಿಮಗೋಸ್ಕರ ದುಡಿಯುತ್ತೇನೆ. ನಾನು ಸಂಪಾದನೆ ಮಾಡಿರುವ ಹೆಸರಿಗೆ ಕಳಂಕ ತರುವ ಕೆಲಸವನ್ನು ಫ್ಯಾನ್ಸ್ ಮಾಡಿಲ್ಲ. ಸಿನಿಮಾ ಎಲ್ಲರೂ ಮಾಡುತ್ತಾರೆ. ಆದರೆ, ಯಶಸ್ಸು ನಂದು ಮಾತ್ರವಲ್ಲ. ವ್ಯಕ್ತಿತ್ವದಲ್ಲಿ ದೊಡ್ಡವರಾಗಬೇಕಾದರೆ ಸಿನಿಮಾ ಮಾತ್ರ ಸಾಕಾಗಲ್ಲ. ನನ್ನ ಕುಟುಂಬ, ಗೆಳೆಯರು ಎಲ್ಲರೂ ಮುಖ್ಯವಾಗುತ್ತಾರೆ ಎಂದಿದ್ದಾರೆ.

- Advertisement -

Latest News

error: Content is protected !!