Saturday, June 13, 2026
Homeತಾಜಾ ಸುದ್ದಿಕೆಲವೇ ಹೊತ್ತಲ್ಲಿ ಬಳ್ಳಾರಿ ಜೈಲು ಸೇರಲಿರುವ ನಟ ದರ್ಶನ್

ಕೆಲವೇ ಹೊತ್ತಲ್ಲಿ ಬಳ್ಳಾರಿ ಜೈಲು ಸೇರಲಿರುವ ನಟ ದರ್ಶನ್

- Advertisement -
- Advertisement -

ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಗೆ ರಾಜ ಮರ್ಯಾದೆ ನೀಡುತ್ತಿರುವ ವಿಚಾರ ಬಯಲಾಗುತ್ತಿದ್ದಂತೆ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲು ಕೋರ್ಟ್ ಅನುಮತಿ ನೀಡಿತ್ತು. ಇದೀಗ ಅದರಂತೆ ನಸುಕಿನ ಜಾವವೇ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ. ಇನ್ನೇನು ಕೆಲವೇ ಹೊತ್ತಲ್ಲಿ ನಟ ದರ್ಶನ್ ಗಣಿನಾಡಿನ ಜೈಲು ಸೇರಲಿದ್ದಾರೆ.

, ಚಿತ್ರದುರ್ಗದ ಬದಲು ಆಂಧ್ರಪ್ರದೇಶದ ಮಾರ್ಗವಾಗಿ ಬಳ್ಳಾರಿಗೆ ಹೋಗುತ್ತಿದ್ದು, ದರ್ಶನ್ ಇರುವ ವಾಹನ ಇದೀಗ ಆಂಧ್ರಪ್ರದೇಶದ ಅನಂತಪುರ ತಲುಪಿದೆ. ಪೊಲೀಸರು ಏಕಾಏಕಿ ರೂಟ್ ಮ್ಯಾಪ್ ಬದಲಾಯಿಸಿದ್ದಾರೆ. ಚಿತ್ರದುರ್ಗದ ಬದಲು ಆಂಧ್ರ ಮಾರ್ಗವಾಗಿ ಬಳ್ಳಾರಿಗೆ ಹೋಗಲಿದ್ದಾರೆ. ಪರಪ್ಪನ ಅಗ್ರಹಾರದಿಂದ ಸಿಲ್ಕ್ ಬೋರ್ಡ್. ಹೆಬ್ಬಾಳ, ಯಲಹಂಕ, ದೇವನಹಳ್ಳಿ, ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಪೆನಗೊಂಡ, ಅನಂತಪುರ ಮಾರ್ಗವಾಗಿ ಬಳ್ಳಾರಿಗೆ ತೆರಳಿದ್ದಾರೆ.

ಮುಂಜಾನೆ 4 ಗಂಟೆ ಸುಮಾರಿಗೆ ಬೋಲೇರೋ ವಾಹನದಲ್ಲಿ ಬಳ್ಳಾರಿ ಸೆಂಟ್ರಲ್ ಜೈಲಿಗೆ ಕರೆದುಕೊಂಡು ಹೋಗಲಾಗುತ್ತಿದೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ರನ್ನು ನ್ಯಾಯಾಲಯದ ಆದೇಶದಂತೆ ಪೊಲೀಸ್ ಭದ್ರತೆಯಲ್ಲಿ ಬಳ್ಳಾರಿಯ ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲಾಗುತ್ತಿದೆ. ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಬಳ್ಳಾರಿ ಜೈಲು ತಲುಪಲಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!