Monday, June 8, 2026
Homeತಾಜಾ ಸುದ್ದಿಮತ್ತೆ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ನಂದಿನಿ ತುಪ್ಪ ಸರಬರಾಜು

ಮತ್ತೆ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ನಂದಿನಿ ತುಪ್ಪ ಸರಬರಾಜು

- Advertisement -
- Advertisement -

ಬೆಂಗಳೂರು: ಒಂದು ವರ್ಷದ ಹಿಂದೆ ತಿರುಪತಿ ತಿರುಮಲಕ್ಕೆ ಸಾಗಿಸುತ್ತಿದ್ದ  ನಂದಿನಿ ತುಪ್ಪದ ಸರಬರಾದು ಸ್ಥಗಿತವಾಗಿತ್ತು. ಇದೀಗ ಮತ್ತೆ ಆರಂಭಗೊಂಡಿದೆ. ಟ್ಯಾಂಕರ್ ಮೂಲಕ ನಂದಿನಿ ತುಪ್ಪವನ್ನು ತಿರುಪತಿ ತಿರುಮಲಕ್ಕೆ ಸಾಗಿಸಲು ನಿನ್ನೆ ಸಿಎಂ ಸಿದ್ಧರಾಮಯ್ಯ ಚಾಲನೆ ನೀಡಿದ್ದಾರೆ.

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ತಿರುಪತಿ ತಿರುಮಲಕ್ಕೆ ಸ್ಥಗಿತವಾಗಿದ್ದ ನಂದಿನಿ ತುಪ್ಪ ಸರಬಾಜಿಗೆ ಟ್ಯಾಂಕರ್ ಮೂಲಕ ಸಾಗಿಸುವುದಕ್ಕೆ ಚಾಲನೆ ನೀಡಿದರು. ಈ ವೇಳೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್, ಎಂಡಿ ಜಗದೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕರ್ನಾಟಕ ಹಾಲು ಮಂಡಳಿಯಿಂದ ತಿರುಮಲ ತಿರುಪತಿ ದೇವಸ್ಥಾನ, ಆಂಧ್ರಪ್ರದೇಶ ರವರಿಗೆ ಹಲವಾರು ವರ್ಷಗಳಿಂದ ಅಸ್ಮಾರ್ಕ್ ಸ್ಪೇಷಲ್ ಗ್ರೇಡ್ ಹೊಂದಿರುವ ಹಸುವಿನ ತುಪ್ಪವನ್ನು ಟ್ಯಾಂಕರ್ ಮೂಲಕ ತಿರುಮಲ ತಿರುಪತಿ ದೇವಸ್ಥಾನಕ್ಕೆ ಪವಿತ್ರ ಶ್ರೀವಾರಿ ಪ್ರಸಾದ ತಯಾರಿಕೆಗೆ “ನಂದಿನಿ ತುಪ್ಪವನ್ನು” ಸರಬರಾಜು ಮಾಡಲಾಗಿರುತ್ತದೆ.ಕಹಾಮದಿಂದ 2013-14ನೇ ಸಾಲಿನಿಂದ 2021-22ರ ವರೆವಿಗೂ 5000 ಮೆ.ಟನ್ ತುಪ್ಪವನ್ನು ತಿರುಮಲ ತಿರುಪತಿ ದೇವಸ್ಥಾನಕ್ಕೆ ಸರಬರಾಜು ಮಾಡಲಾಗಿರುತ್ತದೆ.

ಪ್ರಸ್ತುತ “2024-25 ನೇ ಸಾಲಿನಲ್ಲಿ ತಿರುಮಲ ತಿರುಪತಿ ದೇವಸ್ಥಾನಕ್ಕೆ ಪ್ರಾರಂಭಿಕವಾಗಿ 350 ಮೆ.ಟನ್ ನಂದಿನಿ ತುಪ್ಪವನ್ನು ಸರಬರಾಜು ಮಾಡಲು ಟೆಂಡ‌ ಮೂಲಕ ಬೇಡಿಕೆಯನ್ನು ನೀಡಿರುತ್ತಾರೆ.ಅದರಂತೆ ಬೇಡಿಕೆ ಅನುಗುಣವಾಗಿ ಹಸುವಿನ ತುಪ್ಪವನ್ನು ತಿರುಮಲ ತಿರುಪತಿ ದೇವಸ್ಥಾನಕ್ಕೆ ಟ್ಯಾಂಕರ್‌ ಮಾಲಕ ಸರಬರಾಜು ಮಾಡಲಾಗುತ್ತಿದೆ.

- Advertisement -

Latest News

error: Content is protected !!