- Advertisement -
![]()
- Advertisement -
ಉಪ್ಪಿನಂಗಡಿ; ನೇತ್ರಾವತಿ ನದಿಯಲ್ಲಿ ತೇಲಿ ಹೋದ ಅಪರಿಚಿತ ವ್ಯಕ್ತಿಯ ಮೃತದೇಹ ತೇಲಿ ಹೋದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ನೇತ್ರಾವತಿ ನದಿಯಲ್ಲಿ ಅಪರಿಚಿತ ಗಂಡಸಿನ ಮೃತದೇಹ ತೇಲಿ ಹೋಗುತ್ತಿರೋದನ್ನು ಉಪ್ಪಿನಂಗಡಿ ಬಸ್ ನಿಲ್ದಾಣ ಬಳಿಯ ನೇತ್ರಾವತಿ ಸೇತುವೆಯ ಮೇಲಿನಿಂದ ಸಾರ್ವಜನಿಕರು ಗಮನಿಸಿದ್ದಾರೆ.
ಕೂಡಲೇ ಉಪ್ಪಿನಂಗಡಿ ದೇವಾಲಯದ ಬಳಿಯಿರುವ ಗೃಹರಕ್ಷಕದಳದವರನ್ನೊಳಗೊಂಡ ಪ್ರವಾಹ ರಕ್ಷಣಾ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಆದರೆನದಿಯಲ್ಲಿ ನೀರಿನ ಮಟ್ಟ ಕಡಿಮೆ ಇರುವುದರಿಂದ ಪ್ರವಾಹ ರಕ್ಷಣಾ ತಂಡದವರಿಗೆ ದೋಣಿಗೆ ಒಬಿಎಂ ಸಿಕ್ಕಿಸಿ ದೋಣಿ ಚಲಾಯಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಮೃತದೇಹ ಹಿಡಿಯಲು ಸಾಧ್ಯವಾಗಿಲ್ಲ.
- Advertisement -


