Thursday, June 4, 2026
Homeತಾಜಾ ಸುದ್ದಿಫೇಸ್ ಬುಕ್, ಇನ್'ಸ್ಟಾಗ್ರಾಮ್ ಸೇರಿ 89 ಆ್ಯಪ್‍ ಗಳನ್ನು ಸೈನಿಕರು ಬಳಸುವಂತಿಲ್ಲ !

ಫೇಸ್ ಬುಕ್, ಇನ್’ಸ್ಟಾಗ್ರಾಮ್ ಸೇರಿ 89 ಆ್ಯಪ್‍ ಗಳನ್ನು ಸೈನಿಕರು ಬಳಸುವಂತಿಲ್ಲ !

- Advertisement -
- Advertisement -

ನವದೆಹಲಿ: ತಮ್ಮ ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಖಾತೆಗಳು ಸಹಿತ ಸುಮಾರು 89 ಮೊಬೈಲ್‌ ಅಪ್ಲಿಕೇಶನ್‌ಗಳನ್ನು ನಿಷ್ಕ್ರಿಯಗೊಳಿಸುವಂತೆ ಅಥವಾ ರದ್ದು ಗೊಳಿಸುವಂತೆ ಭಾರತೀಯ ಸೇನೆಯು ಎಲ್ಲ ಯೋಧರಿಗೆ, ಅಧಿಕಾರಿಗಳಿಗೆ ಭಾರತೀಯ ಸೇನೆ ಆದೇಶ ಹೊರಡಿಸಿದೆ.

13 ಲಕ್ಷದಷ್ಟಿರುವ ಯೋಧರು ಜು. 15ರೊಳಗೆ ಆದೇಶ  ಪಾಲಿಸ ಬೇಕು. ತಪ್ಪಿದರೆ ಶಿಸ್ತು ಕ್ರಮ ಕೈಗೊಳ್ಳು ವುದಾಗಿಯೂ ಸೇನೆ ಎಚ್ಚರಿಕೆ ನೀಡಿದೆ.

ಕಳೆದ ಎರಡು - ಮೂರು ವರ್ಷಗಳಲ್ಲಿ ಪಾಕಿಸ್ಥಾನದ ಐಎಸ್‌ಐ ಏಜೆಂಟ್‌ಗಳು ಭಾರತೀಯ ಯೋಧರನ್ನು ಹನಿಟ್ರ್ಯಾಪ್‌ ಖೆಡ್ಡಾಕ್ಕೆ ಕೆಡವಿ, ಸೇನೆಗೆ ಸಂಬಂಧಿಸಿದ ಸೂಕ್ಷ್ಮ ಹಾಗೂ ಮಹತ್ವವಾದ ಮಾಹಿತಿ ಗಳನ್ನು ಕದಿಯಲು ಯತ್ನಿಸಿರುವುದು ಬೆಳಕಿಗೆ ಬಂದಿದೆ. ಇವನ್ನೆಲ್ಲ ತಡೆಗಟ್ಟಲು ಈ ನಿರ್ಣಯಕ್ಕೆ ಬರಲಾಗಿದೆ.

- Advertisement -

Latest News

error: Content is protected !!