Saturday, June 13, 2026
Homeಕೊಡಗು“ಗಾಜಿನ ಸೇತುವೆ"ವೀಕ್ಷಣೆ ಸೆ.15ರ ವರೆಗೆ ಸ್ಥಗಿತ : ಜಿಲ್ಲಾಧಿಕಾರಿಯಿಂದ ಸೂಚನೆ

“ಗಾಜಿನ ಸೇತುವೆ”ವೀಕ್ಷಣೆ ಸೆ.15ರ ವರೆಗೆ ಸ್ಥಗಿತ : ಜಿಲ್ಲಾಧಿಕಾರಿಯಿಂದ ಸೂಚನೆ

- Advertisement -
- Advertisement -

ಮಡಿಕೇರಿ : ಜಿಲ್ಲೆಯಲ್ಲಿನ ‘ಗ್ಲಾಸ್‌ ಬ್ರಿಡ್ಜ್’ಗಳನ್ನು ಸೆ.15ರ ವರೆಗೆ ಸ್ಥಗಿತಗೊಳಿಸುವಂತೆ ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಅವರು ತಮ್ಮ ಕಚೇರಿ ಸಭಾಂಗಣದಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆ ಸಂಬಂಧ ನಡೆದ ಸಭೆಯಲ್ಲಿ ಸೂಚಿಸಿದ್ದಾರೆ.

ಯಾವುದೇ ರೀತಿಯ ಸುರಕ್ಷೆ ಇಲ್ಲದೆ ಗ್ಲಾಸ್‌ ಬ್ರಿಡ್ಜ್ ಗಳನ್ನ ಜಿಲ್ಲೆಯಲ್ಲಿ ನಿರ್ಮಾಣ ಮಾಡಲಾಗಿದ್ದು, ಇಂಥಹ ಗ್ಲಾಸ್‌ ಬ್ರಿಡ್ಜ್ ಗಳಿಗೆ ಪಿಡಿಒಗಳು ಹೇಗೆ ಎನ್‌ಒಸಿ ನೀಡುತ್ತಾರೆ. ಸಭೆಯ ನಡಾವಳಿ ಮಾಡಿಕೊಂಡು ಎನ್‌ಒಸಿ ನೀಡಿದರೆ ಸಾಕೇ? ಸುರಕ್ಷೆ ಬೇಡವೇ? “ಗ್ಲಾಸ್‌ಬ್ರಿಡ್ಜ್” ವೀಕ್ಷಣೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಏನಾದರೂ ತೊಂದರೆಯಾದಲ್ಲಿ ಜವಾಬ್ದಾರಿ ಹೊರುವವರು ಯಾರು? ಎಂದು ಪಂಚಾಯತ್‌ರಾಜ್‌ ಅಧಿಕಾರಿಗಳನ್ನು ಪ್ರಶ್ನಿಸಿದರು.

ಇನ್ನು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮುಂದಿನ ಜುಲೈ ಮತ್ತು ಆಗಸ್ಟ್‌ ತಿಂಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಬೇಕಿದೆ ಎಂದು ಹೇಳಿದರು.

- Advertisement -

Latest News

error: Content is protected !!