Monday, June 8, 2026
HomeUncategorizedಬೆಳ್ತಂಗಡಿ : ಸೇತುವೆಯ ತಡೆಗೋಡೆಗೆ ಡಿಕ್ಕಿಯಾದ ಕೆಎಸ್ ಆರ್ ಟಿಸಿ ಬಸ್

ಬೆಳ್ತಂಗಡಿ : ಸೇತುವೆಯ ತಡೆಗೋಡೆಗೆ ಡಿಕ್ಕಿಯಾದ ಕೆಎಸ್ ಆರ್ ಟಿಸಿ ಬಸ್

- Advertisement -
- Advertisement -

ಬೆಳ್ತಂಗಡಿ : ಸೇತುವೆಯ ತಡೆಗೋಡೆಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿಯಾದ ಘಟನೆ ಘಟನೆ ಕೊಯ್ಯರು ಸಮೀಪದ ಕಾಂತಾಜೆ ಎಂಬಲ್ಲಿ ಭಾನುವಾರ ಬೆಳಿಗ್ಗೆ ನಡೆದಿದೆ.

ಬಂದಾರಿನಿಂದ ಹೊರಟು ಕೊಯ್ಯರು ಮಾರ್ಗವಾಗಿ ಬೆಳ್ತಂಗಡಿಗೆ ಹೋಗುವ ಸರಕಾರಿ ಬಸ್ಸಿನಲ್ಲಿ ಸುಮಾರು 25 ಕ್ಕೂ ಹೆಚ್ಚು ಜನರು ಪ್ರಯಾಣಿಕರಿದ್ದರು.ಚಾಲಕ ಅತೀ ವೇಗವಾಗಿ ಬಸ್ ಚಲಾಯಿಸುವ ವೇಳೆಗೆ ಕೊಯ್ಯರು ಸಮೀಪದ ಕಾಂತಾಜೆಯ ಕಡಿದಾದ ತಿರುವಿನಲ್ಲಿ ನಿಯಂತ್ರಣ ತಪ್ಪಿ ದೊಡ್ಡ ತೋಡಿನ ಸೇತುವೆಯ ತಡೆಗೋಡೆಗೆ ಡಿಕ್ಕಿಯಾಗಿದೆ ಎನ್ನಲಾಗಿದೆ.

ತಡೆಗೋಡೆ ಮುರಿದರೂ ಬಸ್ ಅಲ್ಲಿಯೇ ನಿಂತಿದ್ದು, ಅಂದಾಜು 20 ಅಡಿ ಕೆಳಗೆ ಪ್ರಪಾತಕ್ಕೆ ಬೀಳುವುದು ಕೂದಲೆಳೆ ಅಂತರದಲ್ಲಿ ತಪ್ಪಿದೆ.. ಪ್ರಯಾಣಿಕರು ಚಾಲಕನ ದುರ್ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದು, ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ .

- Advertisement -

Latest News

error: Content is protected !!