Monday, June 17, 2024
Homeಕರಾವಳಿಮಂಗಳೂರುವಿಟ್ಲ; ಮನೆಗೆ ನುಗ್ಗಿ ಬೆಲೆಬಾಳುವ ವಾಚ್ ಕದ್ದು, ಸಿಸಿ ಡಿವಿಆರ್ ಕದ್ದೊಯ್ದ ಕಳ್ಳರು

ವಿಟ್ಲ; ಮನೆಗೆ ನುಗ್ಗಿ ಬೆಲೆಬಾಳುವ ವಾಚ್ ಕದ್ದು, ಸಿಸಿ ಡಿವಿಆರ್ ಕದ್ದೊಯ್ದ ಕಳ್ಳರು

spot_img
- Advertisement -
- Advertisement -

ವಿಟ್ಲ; ಮನೆಗೆ ನುಗ್ಗಿ ಬೆಲೆಬಾಲುವ ವಾಚ್ ಕದ್ದು, ಸಿಸಿ ಟಿವಿ ಡಿವಿಆರ್ ಅನ್ನು ಕಳ್ಳರು ಕದ್ದೊಯ್ದ ಘಟನೆ ವಿಟ್ಲಪಡ್ನೂರು ಗ್ರಾಮದ ಪರ್ತಿಪ್ಪಾಡಿ ಮಸೀದಿ ದ್ವಾರದ ಮುಂಭಾಗದ ಮನೆಯೊಂದರಲ್ಲಿ ನಡೆದಿದೆ.

ಮನೆ ಯಜಮಾನ ಎಂ.ಕೆ.ಖಲೀಲ್ ಕುಟುಂಬ ಅರಬ್ ರಾಷ್ಟ್ರದ ಅಜ್ಮನ್ ನಲ್ಲಿದ್ದು 6 ತಿಂಗಳ ಹಿಂದಷ್ಟೇ ಬಂದು ಹೋಗಿದ್ದರು.ಭಾನುವಾರ  ಬೆಳಗ್ಗೆ ಪಕ್ಕದ ಮನೆಯವರು ನೋಡಿದಾಗ ಮುಂಭಾಗದ ಬಾಗಿಲು ತೆರೆದಿರುವುದನ್ನು ಗಮನಿಸಿ ಸಂಶಯಗೊಂಡಿದ್ದರು.ಮನೆಗೆ ಹೋಗಿ ನೋಡಿದಾಗ ಅಂಗಳದಲ್ಲಿದ್ದ ಸಿ.ಸಿ.ಕ್ಯಾಮರಾದ ದಿಕ್ಕು ಬದಲಾಯಿಸಿ ಮುಂಭಾಗದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಎ.ಸಿ.ಆನ್ ಮಾಡಿಯೇ ನಾಲ್ಕು ಕಪಾಟುಗಳನ್ನು ಒಡೆದು ಸೊತ್ತುಗಳಿಗಾಗಿ ಗಂಟೆಗಳ ಕಾಲ ಸಾಕಷ್ಟು ಜಾಲಾಡಿದ್ದಾರೆ.

ಕಪಾಟಿನಲ್ಲಿದ್ದ ಒಂದು ಲಕ್ಷ ರೂಪಾಯಿ ಮೌಲ್ಯದ ರಾಡೋ ವಾಚ್ ಮಾತ್ರ ನಾಪತ್ತೆಯಾಗಿದೆ. ಮನೆ ಯಜಮಾನ  ಖಲೀಲ್ ಕುಟುಂಬ ವಿದೇಶದಲ್ಲಿರುವ ಕಾರಣ ಅದೃಷ್ಟವಶಾತ್ ಚಿನ್ನಾಭರಣಗಳೆಲ್ಲವೂ ಸುರಕ್ಷಿತವಾಗಿದೆ. ಸೊತ್ತುಗಳಿಗಾಗಿ ಸಾಕಷ್ಟು ಜಾಲಾಡಿದ ಕಳ್ಳರು ಮರಳಿ ಹೋಗುವ ಸಂದರ್ಭ ಡಿ.ವಿ.ಆರ್. ಹೊತ್ತೊಯ್ದಿದ್ದಾರೆ.ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

- Advertisement -
spot_img

Latest News

error: Content is protected !!