Friday, June 5, 2026
Homeಕರಾವಳಿಮಂಗಳೂರುಉಪ್ಪಿನಂಗಡಿಯಲ್ಲಿ ಮಹಿಳೆ ಸಾವು; ಕೊಲೆ ಶಂಕೆ

ಉಪ್ಪಿನಂಗಡಿಯಲ್ಲಿ ಮಹಿಳೆ ಸಾವು; ಕೊಲೆ ಶಂಕೆ

- Advertisement -
- Advertisement -

ಉಪ್ಪಿನಂಗಡಿ; ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಪೆರ್ನೆ ಸಮೀಪದ ಬಿಳಿಯೂರು ದರ್ಖಾಸ್ ನಲ್ಲಿ ನಡೆದಿದೆ.ಹೇಮಾವತಿ (37)  ಮೃತ ಮಹಿಳೆ.

ಇನ್ನು ಮಹಿಳೆಯದ್ದು ಸಹಜ ಸಾವಲ್ಲ ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ.ಹೇಮಾವತಿ ತನ್ನ ತಾಯಿಯೊಂದಿಗೆ ಅಕ್ಕನ ಮನೆಯಲ್ಲಿ ಇದ್ದರು ಎನ್ನಲಾಗಿದೆ. ಅಲ್ಲಿ ಅವರ ಅಕ್ಕನ ಮಗ ಹಾಗೂ ಬಾವ ಇದ್ದರು ಎನ್ನಲಾಗಿದೆ.ಆರಂಭದಲ್ಲಿ ಹೇಮಾವತಿ  ಅವರು ಹೃದಯಾಘಾತವಾಗಿ ಸಾವನ್ನಪ್ಪಿದ್ದರು ಎಂಬ ಸುದ್ದಿ ಹಬ್ಬಿತ್ತು. ಬಳಿಕ ಸಂದೇಹ ಹಿನ್ನೆಲೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.ಅಲ್ಲದೇ ಹೇಮಾವತಿ ಅವರ ಅಕ್ಕನ ಮಗ ಹಾಗೂ ಬಾವ ಶಂಕರ್ ಅವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!