Tuesday, June 9, 2026
Homeಕರಾವಳಿಸುಳ್ಯ; ಕಲ್ಲು ಎತ್ತಿ ಹಾಕಿದ ಯುವಕನ ಕೊಲೆ

ಸುಳ್ಯ; ಕಲ್ಲು ಎತ್ತಿ ಹಾಕಿದ ಯುವಕನ ಕೊಲೆ

- Advertisement -
- Advertisement -

ಸುಳ್ಯ;  ಯುವಕನೊಬ್ಬನನ್ನು ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಸುಳ್ಯದ ಕಾಂತಮಗಲದಲ್ಲಿ ನಡೆದಿದೆ.ಅಜ್ಜಾವರ ಗ್ರಾಮದ ಕಾಂತಮಂಗಲದಲ್ಲಿ ಶಾಲೆಯ ಬಳಿಯೇ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ.

ಮೃತರನ್ನು ಸಂಪಾಜೆ ಸಮೀಪದ ಕುದುರೆಪಾಯ ನಿವಾಸಿ ವಸಂತ ಎಂದು ಗುರುತಿಸಲಾಗಿದೆ. ಕೊಲೆ ನಿಖರ ಕಾರಣ ತಿಳಿದು ಬಂದಿಲ್ಲ. ಇನ್ನು ವಸಂತ ಅವರು ಅಲ್ಲಿಗೆ ಯಾಕೆ ಬಂದಿದ್ದರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!