Saturday, June 13, 2026
Homeತಾಜಾ ಸುದ್ದಿಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ; ಎಸ್ ಐಟಿ ಅಧಿಕಾರಿಗಳಿಗೆ ಹೇಳಿಕೆ ನೀಡಲು ಸಂತ್ರಸ್ತೆಯರು...

ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ; ಎಸ್ ಐಟಿ ಅಧಿಕಾರಿಗಳಿಗೆ ಹೇಳಿಕೆ ನೀಡಲು ಸಂತ್ರಸ್ತೆಯರು ಹಿಂದೇಟು

- Advertisement -
- Advertisement -

ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಎಸ್ ಐ ಟಿ ತಂಡದಿಂದ ತನಿಖೆ ಚುರುಕುಗೊಂಡಿದೆ. ಆದರೆ ಇದೀಗ ಅಧಿಕಾರಿಗಳಿಗೆ ಸಂತ್ರಸ್ತೆಯರಿಂದ ಹೇಳಿಕೆ ಪಡೆಯೋದು ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಅಧಿಕಾರಿಗಳು ಸಂತ್ರಸ್ತೆಯರು ಸಂಪರ್ಕಿಸಿದಾಗ ನಮಗೆ ತೊಂದ್ರೆ ಕೊಡಬೇಡಿ. ತೊಂದ್ರೆ ಕೊಟ್ರೆ ನಾವು ಆತ್ಮಹತ್ಯೆ ಮಾಡಿಕೊಳ್ತೀವಿ ಎಂಬುದಾಗಿ ಹೇಳ್ತಿದ್ದಾರೆ ಎನ್ನಲಾಗಿದೆ.

ಅಶ್ಲೀಲ ವೀಡಿಯೋ ಪ್ರಕರಣ ಸಂಬಂಧ ಎಸ್‌ಐಟಿಯಿಂದ ತನಿಖೆ ನಡೆಸಲಾಗುತ್ತಿದೆ. ಎಸ್‌ಐಟಿಯ ತನಿಖಾ ತಂಡ ದೂರವಾಣಿಯ ಮೂಲಕ ದೂರುದಾರೆ ಸೇರಿದಂತೆ ವೀಡಿಯೋದಲ್ಲಿರುವಂತ ಮಹಿಳೆಯರನ್ನು ಸಂಪರ್ಕಿಸಿ ಹೇಳಿಕೆ ನೀಡೋದಕ್ಕೆ ಮನವೊಲಿಕೆ ಮಾಡೋ ಕಾರ್ಯದಲ್ಲಿ ನಿರತವಾಗಿದೆ.

ದೂರುದಾರೆ ಬಿಟ್ಟು ಉಳಿದವರು ಪ್ರತಿಕ್ರಿಯೆ ನೀಡೋದಕ್ಕೆ ನಿರಾಕರಿಸಿದ್ದಾರೆ ಎನ್ನಲಾಗಿದೆ. ವೀಡಿಯೋದಲ್ಲಿರುವಂತ ಮಹಿಳೆಯರನ್ನು ಸಂಪರ್ಕಿಸಿ ಎಸ್‌ಐಟಿ ಹೇಳಿಕೆ ಪಡೆಯೋದಕ್ಕೆ ಪ್ರಯತ್ನಿಸಿದ್ರೂ ಕೂಡ, ಸಂತ್ರಸ್ತೆಯರು ಮಾತ್ರ ಏನು ಹೇಳಲ್ಲ. ಏನು ಕೇಳ್ಬೇಡಿ ಎಂಬುದಾಗಿ ಹಠ ಹಿಡಿದ್ದಾರೆ ಎನ್ನಲಾಗಿದೆ. ಅಲ್ಲದೇ ನಾವು ದೂರು ಕೊಟ್ಟಿಲ್ಲ. ನಮ್ಮನ್ನು ಏನು ಕೇಳ್ಬೇಡಿ ಎಂಬುದಾಗಿ ಹೇಳುತ್ತಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!