Thursday, June 4, 2026
Homeಕರಾವಳಿಮಂಗಳೂರು2016 ರಲ್ಲಿ ಉಳ್ಳಾಲದಲ್ಲಿ ನಡೆದ ರಾಜೇಶ್ ಕೋಟ್ಯಾನ್ ಕೊಲೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ...

2016 ರಲ್ಲಿ ಉಳ್ಳಾಲದಲ್ಲಿ ನಡೆದ ರಾಜೇಶ್ ಕೋಟ್ಯಾನ್ ಕೊಲೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ

- Advertisement -
- Advertisement -

ಮಂಗಳೂರು; 2016 ರಲ್ಲಿ ಉಳ್ಳಾಲದಲ್ಲಿ ನಡೆದ ರಾಜೇಶ್ ಕೋಟ್ಯಾನ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ.

ಹತ್ಯೆ ಮಾಡಿದ ನಾಲ್ವರು ಅಪರಾಧಿಗಳಿಗೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು ತಲಾ ₹ 25 ಸಾವಿರ ದಂಡ ವಿಧಿಸಿದೆ.

ಉಳ್ಳಾಲ ಆಲದ ಮರದ ಬಳಿಯ ನಿವಾಸಿ, ಚಾಲಕ ಮೊಹಮ್ಮದ್ ಆಸಿಫ್‌ ಅಲಿಯಾಸ್‌ ಆಚಿ (23), ಉಳ್ಳಾಲ ಕೋಡಿಯ ನಿವಾಸಿ ಲೋಡರ್‌ ಮೊಹಮ್ಮದ್ ಸುಹೈಲ್ ಅಲಿಯಾಸ್‌ ಸುಹೈಲ್ (20), ಕೋಡಿ ಮಸೀದಿಯ ಬಳಿಯ ನಿವಾಸಿ, ಕೂಲಿ ಕಾರ್ಮಿಕ ಅಬ್ದುಲ್ ಮುತಾಲಿಕ್ ಅಲಿಯಾಸ್‌ ಮುತ್ತು (20), ಉಳ್ಳಾಲ ಬಸ್ತಿಪಡ್ಪು ಮಂಜಿಲ್‌ ನಿವಾಸಿ, ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಬ್ದುಲ್‌ ಅಸ್ವೀರ್‌ ಅಲಿಯಾಸ್‌ ಅಚ್ಚು (19) ಶಿಕ್ಷೆಗೆ ಒಳಗಾದ ಅಪರಾಧಿಗಳು. 

ದಂಡದ ಮೊತ್ತ ₹ 1.20 ಲಕ್ಷವನ್ನು ಮೃತ ರಾಜೇಶ್ ಕೋಟ್ಯಾನ್ ಅವರ ಪತ್ನಿ ಸವಿತಾ ಅವರಿಗೆ ನೀಡಬೇಕು ಎಂದೂ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿ ಎಚ್. ಎಸ್. ಅವರು ಆದೇಶದಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!