Saturday, June 6, 2026
Homeಮನರಂಜನೆತನಗೆ ಕೊರೊನಾ ಇರೋದು ನಿಜವೆಂದು ಎಲ್ಲರಿಗೂ ವಿಡಿಯೋ ಮೂಲಕ ಧೈರ್ಯ ತುಂಬಿದ ನಟಿ ನವ್ಯ ಸ್ವಾಮಿ

ತನಗೆ ಕೊರೊನಾ ಇರೋದು ನಿಜವೆಂದು ಎಲ್ಲರಿಗೂ ವಿಡಿಯೋ ಮೂಲಕ ಧೈರ್ಯ ತುಂಬಿದ ನಟಿ ನವ್ಯ ಸ್ವಾಮಿ

- Advertisement -
- Advertisement -

ಹೈದರಾಬಾದ್ :  ನಿನ್ನೆಯಷ್ಟೇ ಕನ್ನಡ ಮೂಲದ ತೆಲುಗು ಕಿರುತೆರೆ ನಟಿ ನಾ ಮೇರು ಮೀನಾಕ್ಷಿ ಧಾರಾವಾಹಿ ಖ್ಯಾತಿಯ ನವ್ಯ ಸ್ವಾಮಿಗೆ ಕೊರೊನಾ ಪಾಸಿಟಿವ್ ಅನ್ನೋ ಬಗ್ಗೆ ಹೇಳಿದ್ದೇವು. ಇದೀಗ ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಅವರೇ ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ.

ಯೆಸ್… ನನಗೆ ಕೊರೊನಾ ಪಾಸಿಟಿವ್.. ಗೊತ್ತಾಗುತ್ತಿದ್ದಂತೆ ನನ್ನನ್ನು ನಾನು ಐಸೋಲೇಟ್ ಮಾಡಿಕೊಂಡಿದ್ದೇನೆ. ಹಾಗೇ ನನ್ನ ನಿಕಟ ಸಂಪರ್ಕದಲ್ಲದ್ದವರಿಗೂ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳೋದಕ್ಕೆ ಹೇಳಿದ್ದೇನೆ.. ಕೊರೊನಾ ಪಾಸಿಟಿವ್ ಅಂದಾಕ್ಷಣ ಯಾರು ಕೂಡ ಧೈರ್ಯ ಕಳೆದುಕೊಳ್ಳುವ ಅಗತ್ಯ ಇಲ್ಲ. ಧೈರ್ಯದಿಂದ ಎದುರಿಸಿ ಎಂದಿದ್ದಾರೆ.  ನವ್ಯ ಅವರ ಈ ಧೈರ್ಯ ಹಾಗೂ ಬೋಲ್ಡ್ ನೆಸ್ ಗೆ ಇದೀಗ ಅವರ ಅಭಿಮಾನಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಇನ್ಸ್ ಟ್ಟಾಗ್ರಾಮ್ ನಲ್ಲಿ ವಿಡಿಯೋವನ್ನು ಶೇರ್ ಮಾಡಿದ್ದಾರೆ.

- Advertisement -

Latest News

error: Content is protected !!