Tuesday, June 9, 2026
Homeಅಪರಾಧಮನೆಯ ಹತ್ತಿರ ಮೇಯಲು ಬಂದ 18 ಹಸುಗಳ ಮೇಲೆ ಆಸಿಡ್ ಎರಚಿದ ವೃದ್ಧೆ

ಮನೆಯ ಹತ್ತಿರ ಮೇಯಲು ಬಂದ 18 ಹಸುಗಳ ಮೇಲೆ ಆಸಿಡ್ ಎರಚಿದ ವೃದ್ಧೆ

- Advertisement -
- Advertisement -

ಬೆಂಗಳೂರು ಉತ್ತರ ತಾಲೂಕಿನ ಗುಣಿ ಅಗ್ರಹಾರ ಗ್ರಾಮದ ವೃದ್ಧೆಯೊಬ್ಬರು ಮನೆಯ ಹತ್ತಿರ ಮೇಯಲು ಬಂದ ಹಸುಗಳ ಮೇಕೆ ಆಸಿಡ್ ಎರಚಿದ ಘಟನೆ ನಡೆದಿದೆ.

ಆಸಿಡ್ ಎರಚಿದ ವೃದ್ಧೆ ಜೋಸೆಫ್ ಗ್ರೇಸ್ (76). ಇವರ ಮನೆಯ ಹತ್ತಿರ ಕಳೆದ ಮೂರು ದಿನಗಳಿಂದ ಮೇಯಲು ಬಂದ ಹಸುಗಳ ಮೇಲೆ ನಿರಂತರವಾಗಿ ವೃದ್ಧೆ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಹಸುಗಳ ಮೇಲೆ ಬಾತ್ ರೂಂ ಗೆ ಬಳಸುವಂತಹ ಆಸಿಡ್ ಅನ್ನು ಎರಚಿದ್ದಾರೆ. ಮಾಲೀಕರು ಈ ಕುರಿತು ವಿಚಾರಿಸಿದಾಗ ಇದು ನಮ್ಮ ಖಾಸಗಿ ಸ್ಥಳ, ಇಲ್ಲಿ ಹಸುಗಳನ್ನು ಬಿಟ್ಟಿರುವುದು ಹಸುವಿನ ಮಾಲೀಕರ ತಪ್ಪು, ಹಸುಗಳು ಮನೆ ಬಳಿ ಬರಬಾರದು ಅಂತ ಹೀಗೆ ಮಾಡಿದ್ದು ಅಷ್ಟೇ, ಬೇರೆ ಉದ್ದೇಶ ನನಗಿಲ್ಲ ಎಂದು ವೃದ್ಧೆ ಸಮಜಾಯಿಷಿ ಕೊಟ್ಟಿದ್ದಾರೆ.

ಈ ಘಟನೆಯಿಂದ ನೊಂದ ಮಾಲೀಕರು ನೋವಿನಿಂದಾಗಿ ನಮ್ಮ ಹಸುಗಳು ಮೂಕವಾಗಿ ರೋಧಿಸುತ್ತಿವೆ. ಈ ವೃದ್ಧೆ ಆಸಿಡ್ ಎರಚಿದ್ದರಿಂದ 18 ಹಸುಗಳಿಗೆ ಸುಟ್ಟ ಗಾಯಗಳಾಗಿವೆ. ಸುಟ್ಟ ಗಾಯಗಳಿಂದ ಹಾಲು ಕೂಡ ಕೊಡುತ್ತಿಲ್ಲ ಎಂದು ಮಾಲೀಕರು ಗೋಳಾಡಿದ್ದಾರೆ. ಇನ್ನು ಮಾಲೀಕರ ದೂರಿನ ಮೇರೆಗೆ ಸೋಲದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!