Friday, June 5, 2026
Homeಕರಾವಳಿಮಂಗಳೂರಿನಲ್ಲಿ ಈಜುಕೊಳದಲ್ಲಿ ಮುಳುಗಿ ವ್ಯಕ್ತಿ ಸಾವು

ಮಂಗಳೂರಿನಲ್ಲಿ ಈಜುಕೊಳದಲ್ಲಿ ಮುಳುಗಿ ವ್ಯಕ್ತಿ ಸಾವು

- Advertisement -
- Advertisement -

ಮಂಗಳೂರು : ಈಜುಕೊಳದಲ್ಲಿ ಮುಳುಗಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಮಂಗಳೂರು ಮಹಾನಗರಪಾಲಿಕೆಯ ಈಜುಕೊಳದಲ್ಲಿ ನಡೆದಿದೆ.ಮಂಗಳವಾರ ಸಂಜೆ 4 ರ ಸುಮಾರಿಗೆ ಘಟನೆ ನಡೆದಿದೆ. ಬಿಹಾರ ಮೂಲದ  ಅಭಿಷೇಕ್ (35) ಮೃತ ವ್ಯಕ್ತಿ. ಮಂಗಳೂರು ಮಹಾನಗರ ಪಾಲಿಕೆ ನಿರ್ವಹಣೆ ಮಾಡುವ ಈಜುಕೊಳದಲ್ಲಿ ಈಜುವಾಗ ಘಟನೆ ನಡೆದಿದೆ ಎನ್ನಲಾಗಿದೆ.

15 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದ ಅಭಿಷೇಕರನ್ನು ಈಜುಕೊಳದ ಜೀವರಕ್ಷಕರಾದ ರಾಜೇಂದ್ರ ಮತ್ತು ಪುಂಡಲಿಕ್ ಅವರು ಕೂಡಲೇ ಮೇಲಕ್ಕೆ ತಂದಿದ್ದಾರೆ. ಸ್ಥಳದಲ್ಲಿದ್ದ ಪ್ರೊ, ನರೇಂದ್ರ ನಾಯಕ್ ಮತ್ತು ಇತರರು ಸಿಪಿಆರ್ ಮಾಡಿ ಉಸಿರಾಡುವಂತೆ ಮಾಡಿದರೂ ಪ್ರಯೋಜನವಾಗಿಲ್ಲ.  ಅಭಿಷೇಕ್ ಸಾವು ನೀರಲ್ಲಿ ಉಸಿರುಗಟ್ಟಿ ಸಂಭವಿಸಿದೆಯೇ ಅಥವಾ ಹೃದಯಾಘಾತದಿಂದ ಸಂಭವಿಸಿದೆಯೆ ಎಂದು ತನಿಖೆಯಿಂದ ತಿಳಿದುಬರಬೇಕಿದೆ. 

ಬರ್ಕೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಶವವನ್ನು ಆಸ್ಪತ್ರೆಗೆ ರವಾನೆ ಮಾಡಿದ್ದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. 

- Advertisement -

Latest News

error: Content is protected !!