Saturday, June 13, 2026
Homeಕರಾವಳಿಪೊಲೀಸ್ ಠಾಣೆಯಲ್ಲಿ ಪೊಲೀಸರ ಮೇಲೆಯೇ ಯುವತಿ ಹಲ್ಲೆ ಯತ್ನ: ಡ್ರಗ್ ಅಡಿಕ್ಟ್ ಅಂತಾ ಮಾನಸಿಕ ರೋಗಿಯನ್ನು...

ಪೊಲೀಸ್ ಠಾಣೆಯಲ್ಲಿ ಪೊಲೀಸರ ಮೇಲೆಯೇ ಯುವತಿ ಹಲ್ಲೆ ಯತ್ನ: ಡ್ರಗ್ ಅಡಿಕ್ಟ್ ಅಂತಾ ಮಾನಸಿಕ ರೋಗಿಯನ್ನು ವಶಕ್ಕೆ ಪಡೆದಿದ್ದ ಅಬಕಾರಿ ಸಿಬ್ಬಂದಿ

- Advertisement -
- Advertisement -

ಮಂಗಳೂರು: ಪೊಲೀಸ್ ಠಾಣೆಯಲ್ಲಿ ಯುವತಿಯೊಬ್ಬಳಿಂದ ಪೊಲೀಸರ ಹಲ್ಲೆಗೆ ಯತ್ನ ನಡೆದು ಪೊಲೀಸರು ಕೂಡಾ ಆಕೆಯನ್ನು ನಿಯಂತ್ರಿಸುವ ವೇಳೆ ಹೊಡೆದಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ಕಳೆದ ವಾರ ಈ ಘಟ‌ನೆ ನಡೆದಿದೆ ಎಂದು ಹೇಳಲಾಗಿದೆ.

ಅಬಕಾರಿ ಇಲಾಖೆಯವರು ಡ್ರಗ್ ಶಂಕಿತೆ ಎಂದು ಯುವತಿಯನ್ನು ವಶಕ್ಕೆ ಪಡೆದಿದ್ದ ವೇಳೆ ಅಬಕಾರಿ ಸಿಬ್ಬಂದಿಗಳ ಮೇಲೆ ಯುವತಿ ಹಲ್ಲೆ ಮಾಡಿದ್ದ ಕಾರಣ ಪೊಲೀಸ್ ಠಾಣೆಗೆ ಕರೆ ತಂದಿದ್ದರು ಎನ್ನಲಾಗಿದೆ.

ಈ ವೇಳೆ ಮಹಿಳಾ ಪೊಲೀಸರ ಮೇಲೆ ಯುವತಿ ಹಲ್ಲೆಗೆ ಯತ್ನಿಸಿದ್ದು, ಆಕೆಯನ್ನು ಕೈ ಕೋಳ ತೊಡಿಸಿ ನಿಯಂತ್ರಿಸಲು ಪ್ರಯತ್ನಿಸಿದ್ದಾರೆ.

ಬಳಿಕ ಆಕೆ ಡ್ರಗ್ ಅಡಿಕ್ಟ್ ಅಲ್ಲ ಮಾನಸಿಕ ರೋಗಿ ಅಂತಾ ಮನವರಿಕೆಯಾಗಿದೆ.

ಮಹಿಳಾ ಪೊಲೀಸರು ಯುವತಿಯನ್ನು ಹಿಡಿದು ನಿಯಂತ್ರಣ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

- Advertisement -

Latest News

error: Content is protected !!