Saturday, June 6, 2026
Homeಕರಾವಳಿಬೆಂಗಳೂರಿನಲ್ಲಿ ನಾಳೆ ಸ್ಪಂದನಾ ಅಂತ್ಯಸಂಸ್ಕಾರ

ಬೆಂಗಳೂರಿನಲ್ಲಿ ನಾಳೆ ಸ್ಪಂದನಾ ಅಂತ್ಯಸಂಸ್ಕಾರ

- Advertisement -
- Advertisement -

ಬೆಂಗಳೂರು: ಥೈಲ್ಯಾಂಡ್ ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ನಟ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಪಾರ್ಥೀವ ಶರೀರ ಇಂದು ರಾತ್ರಿ 11 ಗಂಟೆಯ ಸುಮಾರಿಗೆ ಥೈಲ್ಯಾಂಡ್ ನಿಂದ ಬೆಂಗಳೂರಿಗೆ ಆಗಮಿಸಲಿದೆ.

ನಾಳೆ, ಮಧ್ಯಾಹ್ನ 12 ಗಂಟೆಯವರೆಗೆ ಮಲ್ಲೇಶ್ವರಂನಲ್ಲಿರುವಂತ ಸ್ಪಂದನಾ ತಂದೆ ಬಿ.ಕೆ ಶಿವರಾಂ ಮನೆಯ ಮುಂದೆ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.ಈ ಬಳಿಕ ಬೆಂಗಳೂರಿನ ಹರಿಶ್ಚಂದ್ರ ಘಾಟ್ ನಲ್ಲಿ ಸ್ಪಂದನಾ ಅಂತ್ಯಸಂಸ್ಕಾರವನ್ನು ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಈಗಾಗಲೇ ಥೈಲ್ಯಾಂಡ್ ನಲ್ಲಿ ಸ್ಪಂದನಾ ಅವರ ಮೃತದೇಹವನ್ನು ಶವಪರೀಕ್ಷೆ ನೆರವೇರಿಸಲಾಗಿದೆ. ಅಂತಿಮ ಕಾನೂನು ಕ್ರಮಗಳನ್ನು ಮುಕ್ತಾಯಗೊಳಿಸಲಾಗಿದೆ. ಇನ್ನೂ ವಿಶೇಷ ವಿಮಾನದಲ್ಲಿ ಇಂದು ರಾತ್ರಿ 11 ಗಂಟೆಗೆ ಬೆಂಗಳೂರನ್ನು ತಲುಪಲಿದೆ. ನಾಳೆ ಬೆಂಗಳೂರಿಗೆ ಸ್ಪಂದನಾ ಪಾರ್ಥೀವ ಶರೀರ ಆಗಮಿಸಿದ ನಂತ್ರ, ಸಾರ್ವಜನಿಕರ ಅಂತಿಮ ದರ್ಶನದ ಬಳಿಕ ಬೆಂಗಳೂರಲ್ಲೇ ಅಂತಿಮ ಸಂಸ್ಕಾರ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!