Saturday, June 6, 2026
Homeಕರಾವಳಿಉಪ್ಪಿನಂಗಡಿ;ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ಬೈಕ್ ಢಿಕ್ಕಿ ; ಬೈಕ್ ಸವಾರ ಯುವಕ ಸಾವು

ಉಪ್ಪಿನಂಗಡಿ;ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ಬೈಕ್ ಢಿಕ್ಕಿ ; ಬೈಕ್ ಸವಾರ ಯುವಕ ಸಾವು

- Advertisement -
- Advertisement -

ಉಪ್ಪಿನಂಗಡಿ;ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ಬೈಕ್ ಢಿಕ್ಕಿಯಾಗಿ  ಸವಾರ  ಮೃತಪಟ್ಟ ಘಟನೆ
ಮಂಗಳೂರು- ಬೆಂಗಳೂರು ರಸ್ತೆಯ ಉಪ್ಪಿನಂಗಡಿಯ ಸಣ್ಣಂಪಾಡಿ ಎಂಬಲ್ಲಿ ಘಟನೆ ನಡೆದಿದೆ.

ನೆಲ್ಯಾಡಿ ಮೊರೆಂಕಳ‌ನಿವಾಸಿ ಇಕ್ಬಾಲ್(25) ಮೃತ ದುರ್ದೈವಿ.ಇಕ್ಬಾಲ್ ಕೆಲಸದ ನಿಮಿತ್ತ ಉಪ್ಪಿನಂಗಡಿಗೆ ಬಂದಿದ್ದು, ಬಳಿಕ ಕೆಲಸ ಮುಗಿಸಿ ವಾಪಾಸ್ಸು ತೆರಳುವಾಗ ಬೈಕ್ ಸಣ್ಣಂಪಾಡಿ ಬಳಿ ಕೆಟ್ಟು ನಿಂತಿದ್ದ ಲಾರಿಗೆ ಹಿಂದಿನಿಂದ ಢಿಕ್ಕಿ ಹೊಡೆದು ಅಪಘಾತ ನಡೆದಿದೆ.

ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!