Thursday, June 25, 2026
Homeಕರಾವಳಿಬಂಟ್ವಾಳ: ನಾಯಿಯ ಜೀವ ಉಳಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಲಾರಿ ಅಪಘಾತ

ಬಂಟ್ವಾಳ: ನಾಯಿಯ ಜೀವ ಉಳಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಲಾರಿ ಅಪಘಾತ

- Advertisement -
- Advertisement -

ಬಂಟ್ವಾಳ: ನಾಯಿಯ ಜೀವ ಉಳಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಲಾರಿಯೊಂದು ರಸ್ತೆಯಲ್ಲಿ ಉರುಳಿದ ಘಟನೆ ವಿಟ್ಲ ಕೆಲಿಂಜ ಕೊಟ್ಟಾರಿ ಕಟ್ಟೆಯಲ್ಲಿ ನಿನ್ನೆ ಸಂಜೆ ನಡೆದಿದೆ.  ಘಟನೆಯಲ್ಲಿ ಲಾರಿ ಚಾಲಕ ಅಪಾಯವಿಲ್ಲದೇ ಪಾರಾಗಿದ್ದಾರೆ.

ಕಲ್ಲಡ್ಕದಿಂದ ಪೆರ್ಲ ಕಡೆ ಸಾಗುತ್ತಿದ್ದ ಸಿಮೆಂಟ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ವಿಟ್ಲ ಕೆಲಿಂಜ ಕೊಟ್ಟಾರಿ ಕಟ್ಟೆಯಲ್ಲಿ ಉರುಳಿದೆ. ಚಾಲಕ ಲಾರಿಯೊಳಗೆ ಸಿಲುಕಿ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಲಾರಿಯೊಳಗೆ ಸಿಲುಕಿಕೊಂಡ ಚಾಲಕನನ್ನು ಸ್ಥಳೀಯರು ಹರಸಾಹಸಪಟ್ಟು ರಕ್ಷಣೆ ಮಾಡಿದ್ದಾರೆ. ಅಪಘಾತದ ರಭಸಕ್ಕೆ ಲಾರಿಯಲ್ಲಿದ್ದ ಸಿಮೆಂಟ್ ಚೆಲ್ಲಾಪಿಲ್ಲಿಯಾಗಿ ರಸ್ತೆಯಲ್ಲಿತ್ತು.

- Advertisement -

Latest News

error: Content is protected !!