Friday, June 5, 2026
Homeಕರಾವಳಿಮಂಗಳೂರು; ಉಳ್ಳಾಲದಲ್ಲಿ ಮೆಹಂದಿ ದಿನ ವರ ನಾಪತ್ತೆ ಪ್ರಕರಣ; ಮನೆಗೆ ಮರಳಿದ ಯುವಕ ಹೇಳಿದ್ದೇನು?

ಮಂಗಳೂರು; ಉಳ್ಳಾಲದಲ್ಲಿ ಮೆಹಂದಿ ದಿನ ವರ ನಾಪತ್ತೆ ಪ್ರಕರಣ; ಮನೆಗೆ ಮರಳಿದ ಯುವಕ ಹೇಳಿದ್ದೇನು?

- Advertisement -
- Advertisement -

ಮಂಗಳೂರು; ಉಳ್ಳಾಲದಲ್ಲಿ ಮೆಹಂದಿ ದಿನ ನಾಪತ್ತೆಯಾಗಿದ್ದ ವರ ಬಳಿಕ ಬಳ್ಳಾರಿಯಲ್ಲಿ ಪತ್ತೆಯಾಗಿದ್ದ. ಇದೀಗ ಯುವಕ ಮನೆಗೆ ವಾಪಾಸ್ಸಾಗಿದ್ದಾರೆ. ಆ ಮೂಲಕ ಪ್ರಕರಣ ಸುಖಾಂತ್ಯವಾಗಿದೆ.

ವರ್ಕಾಡಿ ದೇವಂದಪಡ್ಪುವಿನ ಉದ್ಯಮಿ‌ ಐತಪ್ಪ ಶೆಟ್ಟಿ ಎಂಬವರ ಪುತ್ರ ಕಿಶನ್ ಶೆಟ್ಟಿ ಮೇ 31ರಂದು ಮೆಹಂದಿ ಶಾಸ್ತ್ರಕ್ಕೆ ಹಣ್ಣು ತರಲು ತೆರಳಿ ಬಳಿಕ ನಾಪತ್ತೆಯಾಗಿದ್ದರು. ಇದರಿಂದ ಮರುದಿನ ನಡೆಯಬೇಕಿದ್ದ ವಿವಾಹ ರದ್ದಾಗಿತ್ತು.ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿ ಯುವಕನ ಹುಡುಕಾಟ ನಡೆದಿತ್ತು.ಆದರೂ ಪತ್ತೆಯಾಗಿರಲಿಲ್ಲ.ಅದಾದ ಕೆಲ‌ದಿನಗಳ ಬಳಿಕ ಸಹೋದರಿಗೆ ಸಂದೇಶ ಕಳುಹಿಸಿ ಮನೆಗೆ ಬರುವುದಿಲ್ಲ ಎಂದು ಸಂದೇಶ ಕಳುಹಿಸಿದ್ದರು.ಟವರ್ ಲೊಕೇಶನ್ ನೋಡಿದಾಗ ಬಳ್ಳಾರಿಯದ್ದು ಎಂದು ತಿಳಿದು ಬಂದಿತ್ತು. ಜೂ.16 ರಂದು ಕಿಶನ್ ಶೆಟ್ಟಿ ಕೊಣಾಜೆ ಠಾಣೆಗೆ ಬಂದು ಮನೆಗೆ ವಾಪಸ್ಸಾಗಿದ್ದಾರೆ. ಇಷ್ಟು ದಿನ ಅವರು ಬಳ್ಳಾರಿ, ಬೆಂಗಳೂರು ಬಳಿ ಇವರು ಇದ್ದರು ಎನ್ನಲಾಗಿದೆ.ಕಿಶನ್ ಶೆಟ್ಟಿ ಕೇರಳದ ಕುಂಜತ್ತೂರು ಬಳಿಯ ಯುವತಿಯನ್ನು ಕಾಲೇಜು ದಿನಗಳಿಂದ ಪ್ರೀತಿಸುತ್ತಿದ್ದ ಎನ್ನಲಾಗಿದೆ.

ಕಿಶನ್ ಗೆ ನಿಶ್ಚಿತಾರ್ಥದ ವಿಷಯ ತಿಳಿದು ಪ್ರೀತಿಸಿದ ಯುವತಿ ತನ್ನ‌ ಬಿಟ್ಟು ಬೇರೆ ಮದುವೆಯಾದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಅಥವಾ ಮದುವೆ ತಡೆಯುವುದಾಗಿ ಬೆದರಿಕೆ ಒಡ್ಡಿದ್ದಳು.ಇದಕ್ಕೆ ಹೆದರಿದ ಕಿಶನ್ ಮೆಹಂದಿ ದಿನವೇ ನಾಪತ್ತೆಯಾಗಿದ್ದರು ಎನ್ನಲಾಗಿದೆ.ಇದೀಗ ಕಿಶನ್ ವಾಪಾಸ್ಸು ಬರುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.

- Advertisement -

Latest News

error: Content is protected !!