Sunday, June 7, 2026
Homeಕರಾವಳಿಉಡುಪಿಉಡುಪಿ; ಕಸದೊಂದಿಗೆ ಸಿಕ್ಕಿದ ಚಿನ್ನದುಂಗುರವನ್ನು ಮರಳಿಸಿದ ಸ್ವಚ್ಛತಾ ಕಾರ್ಮಿಕೆ

ಉಡುಪಿ; ಕಸದೊಂದಿಗೆ ಸಿಕ್ಕಿದ ಚಿನ್ನದುಂಗುರವನ್ನು ಮರಳಿಸಿದ ಸ್ವಚ್ಛತಾ ಕಾರ್ಮಿಕೆ

- Advertisement -
- Advertisement -

ಉಡುಪಿ; ಕಸದೊಂದಿಗೆ ಸಿಕ್ಕಿದ ಚಿನ್ನದುಂಗುರವನ್ನು ಸ್ವಚ್ಛತಾ ಕಾರ್ಮಿಕೆ ಮರಳಿಸಿದ ಘಟನೆ ಶಂಕರನಾರಾಯಣ ಗ್ರಾಮ ಪಂಚಾಯತ್‌ನ ಎಸ್‌ಎಲ್‌ಆರ್‌ಎಂ ಘಟಕದಲ್ಲಿ ನಡೆದಿದೆ. ಸ್ವಚ್ಚತಾ ಗಾರರಾದ ದೇವಕಿ ಅವರಿಗೆ ಘನ ತ್ಯಾಜ್ಯ ದಲ್ಲಿ ಸಿಕ್ಕಿದ ಚಿನ್ನದ ಉಂಗುರವನ್ನು ವಾರೀಸುದಾರರಿಗೆ ಹಸ್ತಾಂತರಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.

ಪ್ರತಿದಿನ ಕಸ ನೀಡುವ ಮನೆಯವರ 2 ಗ್ರಾಂ ತೂಕದ ಚಿನ್ನ ಉಂಗುರ ಕಳೆದು ಹೋಗಿತ್ತು.

ಈ ಬಗ್ಗೆ ಕಸ ವಿಲೇವಾರಿ ಘಟಕದವರಿಗೆ ಮಾಹಿತಿ ನೀಡಿ, ಕಸದ ಜೊತೆ ಬಂದಿದ್ದರೆ ನೀಡುವಂತೆ ಕೇಳಿಕೊಂಡಿದ್ದರು. ಅದರಂತೆ ಬೈಲೂರು ಮೂಡುಬೈಲೂರಿನಲ್ಲಿ ಕಸ ವಿಲೇವಾರಿ ಮಾಡುವಾಗ ಕಸದಲ್ಲಿ ಚಿನ್ನದ ಉಂಗುರ ದೇವಕಿ ಅವರಿಗೆ ಸಿಕ್ಕಿತ್ತು. ಕೂಡಲೇ ಅವರು ಸಂಬಂಧಪಟ್ಟ ಮನೆಯವರಿಗೆ ಮಾಹಿತಿ ನೀಡಿ ವಾರೀಸುದಾರ ಕುಶಾಲ್ ಕೊಠಾರಿ ಅವರಿಗೆ ಹಸ್ತಾಂತರಿಸಿದ್ದಾರೆ.

- Advertisement -

Latest News

error: Content is protected !!