Friday, September 11, 2026
Homeತಾಜಾ ಸುದ್ದಿಬೆಳ್ತಂಗಡಿ: ತಾಲ್ಲೂಕಿನ ವಿವಿಧ ಚರ್ಚ್‌ಗಳಿಗೆ ಭೇಟಿ ನೀಡಿ, ಮತಯಾಚಿಸಿದ ಹರೀಶ್‌ ಪೂಂಜ

ಬೆಳ್ತಂಗಡಿ: ತಾಲ್ಲೂಕಿನ ವಿವಿಧ ಚರ್ಚ್‌ಗಳಿಗೆ ಭೇಟಿ ನೀಡಿ, ಮತಯಾಚಿಸಿದ ಹರೀಶ್‌ ಪೂಂಜ

- Advertisement -
- Advertisement -

ಬೆಳ್ತಂಗಡಿ : ಶಾಸಕ ಹರೀಶ್‌ ಪೂಂಜ ಅವರು ಇಂದು ತಾಲ್ಲೂಕಿನ ವಿವಿಧ ಚರ್ಚ್‌ಗಳಿಗೆ ಭೇಟಿ ನೀಡಿ ಕ್ರೈಸ್ತ ಧರ್ಮದ ಮತದಾರರ ಬಳಿ ಮತಯಾಚಿಸಿದರು.

ಸೆಕ್ರೆಡ್‌ ಹಾರ್ಟ್‌ ಚರ್ಚ್ ಮಡಂತ್ಯಾರು,‌ ಸಂತ ರಫಾಯೆಲ್‌ ಚರ್ಚ್ ಬದ್ಯಾರು, ಸಂತ ಸೆಬಾಸ್ಟಿನ್‌ ಚರ್ಚ್ ಗರ್ಡಾಡಿ, ಸಂತ ಪೀಟರ್‌ ಕ್ಲೆವರ್‌ ಚರ್ಚ್ ಅಳದಂಗಡಿ,‌ ಕ್ರಿಸ್ತರಾಜ ಚರ್ಚ್ ವೇಣೂರು‌ ಇಲ್ಲಿಗೆ ಭೇಟಿ ನೀಡಿ ಕ್ರೈಸ್ತ ಧರ್ಮಿಯರ ಬಳಿ ಮತ ಯಾಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಜೋಯೆಲ್‌ ಮೆಂಡೋನ್ಸಾ, ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಬೇಬಿ ಸುಜನ್ಹಾ, ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷ ಆಶಾ ಸಾಲ್ಡಾನ, ಪಡಂಗಡಿ ಸಿಎ ಬ್ಯಾಂಕ್‌ ಅಧ್ಯಕ್ಷ ಆಂಟೋನಿ ಗರ್ಡಾಡಿ‌, ಪಡಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕವಿತಾ ಮೊನಿಸಾ, ತಾಲೂಕು ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಅರುಣ್ ಕ್ರಾಸ್ತಾ, ವೇಣೂರು ಗ್ರಾಮ ಪಂಚಾಯತ್ ಸದಸ್ಯ ಅನೂಪ್ ಜೆ. ಪಾಯಸ್‌, ಮಾಲಾಡಿ ಗ್ರಾಮ ಪಂಚಾಯತ್ ಸದಸ್ಯ ಸೆಲೆಸ್ಟಿನಾ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

- Advertisement -

Latest News

error: Content is protected !!