Monday, May 6, 2024
Homeಕರಾವಳಿಪುತ್ತೂರು: ಬಿಜೆಪಿ ಮಹಾಸಂಪರ್ಕ ಅಭಿಯಾನದ ಸಂಚಲನ, ಒಂದೇ ದಿನ 34000 ಮತದಾರರ ಸಂಪರ್ಕ

ಪುತ್ತೂರು: ಬಿಜೆಪಿ ಮಹಾಸಂಪರ್ಕ ಅಭಿಯಾನದ ಸಂಚಲನ, ಒಂದೇ ದಿನ 34000 ಮತದಾರರ ಸಂಪರ್ಕ

spot_img
- Advertisement -
- Advertisement -

ಪುತ್ತೂರು: ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಭಾನುವಾರ ಬಿಜೆಪಿ ಮಹಾಸಂಪರ್ಕ ಅಭಿಯಾನ ನಡೆಸಿದ್ದು, ತಾಲೂಕಿನಾದ್ಯಂತ ಸಂಚಲನ ಸೃಷ್ಟಿಸಿತು.

ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಅವರ ಸಾರಥ್ಯದಲ್ಲಿ ತಾಲೂಕಿನ ಪ್ರತಿ ಬೂತ್ನ ಮತದಾರರನ್ನು ಸಂಪರ್ಕಿಸಿ, ಬಿಜೆಪಿ ಸರಕಾರದ ಸಾಧನೆಗಳನ್ನು ಅವರಿಗೆ ತಲುಪಿಸಲಾಯಿತು.

ಕರ್ನಾಟಕದಲ್ಲಿ ಕಳೆದ ಮೂರುವರೆ ವರ್ಷದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರ, ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಪುತ್ತೂರು ಒಂದೇ ವಿಧಾನಸಭಾ ಕ್ಷೇತ್ರಕ್ಕೆ ಸಾವಿರ ಕೋಟಿ ರೂ.ಗೂ ಮಿಕ್ಕಿ ಅನುದಾನವನ್ನು ಬಿಡುಗಡೆ ಮಾಡಿದೆ ಅಂದರೆ ಬಿಜೆಪಿ ಮಾಡಿರುವ ಕಾರ್ಯಗಳನ್ನು ಗಮನಿಸಬೇಕು. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಅಂದರೆ ಡಬಲ್ ಇಂಜಿನ್ ಸರಕಾರ ಇದ್ದುದರಿಂದ ಇಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಯಿತು. ಇನ್ನಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಿದ್ದರೆ, ಮುಂದೆಯೂ ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿರಬೇಕು. ಆದ ಕಾರಣ, ರಾಜ್ಯಕ್ಕೆ ಬಿಜೆಪಿ ಅನಿವಾರ್ಯ. ಬಹುಮತ ಪಡೆಯಲು 130ಕ್ಕೂ ಅಧಿಕ ಸ್ಥಾನಗಳನ್ನು ಬಿಜೆಪಿ ಪಡೆಯಬೇಕಿದ್ದು, ಅದಕ್ಕಾಗಿ ಒಂದೊಂದು ಕ್ಷೇತ್ರವೂ ಅಮೂಲ್ಯ. ಒಂದೊಂದು ಕ್ಷೇತ್ರದಲ್ಲೂ ಅಧಿಕಾರ ಪಡೆಯಬೇಕಿದ್ದರೆ, ಒಂದೊಂದು ಮತಗಳು ಅಮೂಲ್ಯ. ಆದ್ದರಿಂದ ಮತ ಪೋಲಾಗದಂತೆ ಎಚ್ಚರಿಕೆ ವಹಿಸಿ, ಬಿಜೆಪಿಯನ್ನು ಗೆಲ್ಲಿಸಿಕೊಡಬೇಕು ಎಂದು ಮನವಿ ಮಾಡಿಕೊಳ್ಳಲಾಯಿತು.

ಜಿಲ್ಲಾ ಕೇಂದ್ರಕ್ಕೆ ಬಿಜೆಪಿ ಪೂರಕ:
ಪುತ್ತೂರು ಜಿಲ್ಲಾ ಕೇಂದ್ರ ಆಗಬೇಕು ಎಂಬ ಹಿನ್ನೆಲೆಯಲ್ಲಿ ಶಾಸಕ ಸಂಜೀವ ಮಠಂದೂರು ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಈ ಎಲ್ಲಾ ಅಭಿವೃದ್ಧಿ ಕಾರ್ಯಗಳು ಒಂದಕ್ಕೊಂದು ಪೂರಕ. ಆದ್ದರಿಂದ ಈಗ ನಡೆದಿರುವ ಕಾಮಗಾರಿಗಳಿಗೆ ಒಂದು ರೂಪು ನೀಡಿ, ಮತ್ತೆ ಪುತ್ತೂರನ್ನು ಜಿಲ್ಲಾ ಕೇಂದ್ರವಾಗಿ ಮಾಡಬೇಕಾದರೆ, ಮತ್ತೆ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಬೇಕು. ತಪ್ಪಿದಲ್ಲಿ, ಬಿಜೆಪಿ ಸರಕಾರ ಕಳೆದ 3.5 ವರ್ಷಗಳಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳಿಗೆ ಬೆಲೆಯೇ ಇರುವುದಿಲ್ಲ ಎಂದು ಮತದಾರರಿಗೆ ನೆನಪಿಸಲಾಯಿತು.
ಬಿಜೆಪಿ ಪರವಾಗಿರುವ ಘೋಷಣೆಗಳೊಂದಿಗೆ ನಡೆದ ಅಭಿಯಾನದಲ್ಲಿ ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡರು. ಪ್ರತಿ ಬೂತ್ಗೂ ಬೂತ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ತಂಡವಾಗಿ ತೆರಳಿ, ಮತ ಯಾಚಿಸಿದರು. ಇದೇ ಸಂದರ್ಭ ಕಾರ್ಯಕರ್ತರ ಮನೆಮನೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ಗೆ ವೀಕ್ಷಿಸಲಾಯಿತು.

34 ಸಾವಿರ ಮತದಾರನ್ನು ತಲುಪಿದ ಮಹಾಸಂಪರ್ಕ
ಪುತ್ತೂರು ವಿಧಾನಸಭಾ ಕ್ಷೇತ್ರದ ಒಟ್ಟು 220 ಬೂತ್ಗಳಿದ್ದು, ಅಷ್ಟು ಬೂತ್ಗಳಿಗೂ ಭಾನುವಾರ ಭೇಟಿ ನೀಡಲಾಯಿತು. 4860 ಕಾರ್ಯಕರ್ತರು ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದು, 11450 ಮನೆಗಳನ್ನು ಸಂಪರ್ಕಿಸಲಾಯಿತು. 34 ಸಾವಿರ ಮತದಾರರನ್ನು ತಲುಪುವ ಮೂಲಕ, ಬಿಜೆಪಿ ಮಹಾಸಂಪರ್ಕ ಅಭಿಯಾನ ಅಭೂತಪೂರ್ವ ಯಶಸ್ಸನ್ನು ಪಡೆದುಕೊಂಡಿತು.

ನಾರಿ ಶಕ್ತಿ:
ಅಭಿಯಾನದುದ್ದಕ್ಕೂ ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ನೆರೆದು ಮಹಿಳಾ ಶಕ್ತಿಯನ್ನು ಅನಾವರಣಗೊಳಿಸಿದರು. ಮಹಿಳಾ ಹಿರಿಯ ನಾಗರಿಕರು ಪಾಲ್ಗೊಂಡಿದ್ದು, ಉಳಿದ ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿತು.

- Advertisement -
spot_img

Latest News

error: Content is protected !!