Sunday, June 7, 2026
Homeತಾಜಾ ಸುದ್ದಿಎಸಿ ಸ್ಪೋಟಗೊಂಡು ತಾಯಿ ಹಾಗೂ ಇಬ್ಬರು ಮಕ್ಕಳು ಸಜೀವ ದಹನ

ಎಸಿ ಸ್ಪೋಟಗೊಂಡು ತಾಯಿ ಹಾಗೂ ಇಬ್ಬರು ಮಕ್ಕಳು ಸಜೀವ ದಹನ

- Advertisement -
- Advertisement -

ರಾಯಚೂರು: ಎಸಿ ಸ್ಪೋಟಗೊಂಡು ತಾಯಿ ಹಾಗೂ ಇಬ್ಬರು ಮಕ್ಕಳು ಸಜೀವ ದಹನವಾಗಿರುವ ಘಟನೆ ರಾಯಚೂರು ಜಿಲ್ಲೆಯ ರಾಯಚೂರು ತಾಲೂಕಿನ ಶಕ್ತಿನಗರದಲ್ಲಿ ನಡೆದಿದೆ.

ರಾಯಚೂರು ತಾಲೂಕಿನ ಶಕ್ತಿನಗರದಲ್ಲಿರುವ ಆರ್ ಟಿ ಪಿಎಸ್ ಎಇಇ ಸಿದ್ದಲಿಂಗಯ್ಯ ಸ್ವಾಮಿ ಎಂಬುವರ ಮನೆಯಲ್ಲಿ ಎಸಿ ಸ್ಟೋಟಗೊಂಡಿದೆ.ಈ ಬಳಿಕ ಉಂಟಾದ ಬೆಂಕಿಯಿಂದಾಗಿ ಮನೆಯಲ್ಲಿದ್ದಂತ ಅವರ ಪತ್ನಿ ರಂಜಿತಾ (33) ಹಾಗೂ ಇಬ್ಬರು ಮಕ್ಕಳಾದ ಮೈದಲ್ (13), ತಾರುಣ್ಯ (5) ಸಜೀವ ದಹನವಾಗಿದ್ದಾರೆ.

ಆರ್ ಟಿ ಪಿಎಸ್ ಎಇಇ ಸಿದ್ಧಲಿಂಗಯ್ಯ ಸ್ವಾಮಿ ಮಂಡ್ಯ ಮೂಲದವರು ಎಂದು ತಿಳಿದು ಬಂದಿದೆ. ರಾಯಚೂರಿನಲ್ಲಿ ಎಇಇಯಾಗಿ ಆರ್ ಟಿ ಪಿಎಸ್ ನಲ್ಲಿ ಕೆಲಸ ಮಾಡುತ್ತಿದ್ದರು. ಶಕ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!